ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಜೀಪ್: ಚಾಲಕಿ ಸ್ಥಳದಲ್ಲೇ ಮೃತ್ಯು
ಚಿಕ್ಕಮಗಳೂರು: ಹೊರನಾಡಿಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಜೀಪ್ ಹಳ್ಳಕ್ಕೆ ಬಿದ್ದ ಪರಿಣಾಮ ಚಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಳಸ ತಾಲೂಕಿನಲ್ಲಿ ನಡೆದಿದೆ.

ಹೊಸಗದ್ದೆಯಿಂದ ಹೊರನಾಡಿಗೆ ಹೋಗುವಾಗ ಮಂಗಳವಾರ ಸಂಜೆ ಮಾರ್ಗಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಜೀಪ್ ಪಲ್ಟಿಯಾದ ಬಳಿಕ ಹಳ್ಳದ ನೀರಿಗೆ ಬಿದ್ದಿದೆ.
ಜೀಪಿನಲ್ಲಿ ಧರ್ಮೇಂದ್ರ ಅವರ ಪತ್ನಿ ಅಕ್ಷತಾ ಒಬ್ಬರೇ ಇದ್ದು, ಅವರೇ ಚಲಾಯಿಸುತ್ತಿದ್ದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹೋಗಿ ಅಕ್ಷತಾ ಅವರನ್ನು ಮೇಲಕ್ಕೆ ಎತ್ತಿದರೂ ಕೂಡ ಅಷ್ಟರಲ್ಲಿ ಪ್ರಾಣ ಹೋಗಿತ್ತು. ಮೃತ ಅಕ್ಷತಾಗೆ 12 ಹಾಗೂ 6 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



