ಕರಾವಳಿ

ಶೇವಿರೆ ಮಾಡತ್ತಾರು-ರಕ್ತೇಶ್ವರಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ:
50 ವರ್ಷಗಳ ಹಿಂದಿನ ಬೇಡಿಕೆ ಈಡೇರಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರು ನಗರಕ್ಕೆ ತಾಗಿಕೊಂಡಿರುವ ಕಬಕ ಗ್ರಾಪಂ ವ್ಯಾಪ್ತಿಗೊಳಪಟ್ಟ ಶೇವಿರೆ -ಮಾಡತ್ತಾರು- ರಕ್ತೇಶ್ವರಿ ಸಂಪರ್ಕ ರಸ್ತೆ, ಇದು ಸುಮಾರು 50 ವರ್ಷಗಳಿಂದ ಕಾಲು ದಾರಿಯಾಗಿಯೇ ಇತ್ತು. ಈ ಭಾಗದ ಬಹುತೇಕ ಜನರು ಈ ಕಾಲುದಾರಿಯಲ್ಲೇ ಮುಖ್ಯ ರಸ್ತರೆಗೆ ಬರುವಂತಿತ್ತು. ಇಲ್ಲಿ ರಸ್ತೆ ನಿರ್ಮಾಣ ಮಾಡಿ ಎಂದು ಕಳೆದ 50 ವರ್ಷಗಳಿಂದ ಬೇಡಿಕೆ ಇಡಲಾಗಿತ್ತು. ಪ್ರತೀ ಬಾರಿ ಚುನಾವಣೆ ಬಂದಾಗ ಇಲ್ಲಿನ ರಸ್ತೆಯ ವಿಚಾರ ಚಿಗುರೊಡೆಯುತ್ತದೆ , ಚುನಾವಣೆ ಮುಗಿದ ಬಳಿಕ ರಸ್ತೆ ವಿಚಾರವೂ ಕಮರಿ ಹೋಗುತ್ತಿತ್ತು. ಈ ವಿಚಾರವನ್ನು ಶಾಸಕ ಅಶೋಕ್ ರೈ ಗಮನಕ್ಕೆ ತಂದ ಸ್ಥಳೀಯರು ರಸ್ತೆ ನಿರ್ಮಾಣ ಮಾಡುವಲ್ಲಿದ್ದ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿದ ಶಾಸಕ ಅಶೋಕ್ ರೈ ಅವರು ಇಲ್ಲಿ ರಸ್ತೆ ನಿರ್ಮಾಣಕ್ಕೆ 15 ಲಕ್ಷ ರೂ ಅನುದಾನ ಇಟ್ಟು ಗುದ್ದಲಿಪೂಜೆಯನ್ನೂ ನೆರವೇರಿಸಿದ್ದಾರೆ.


ಶೇವಿರೆ -ಮಾಡತ್ತಾರು ರಕ್ತೇಶ್ವರಿ ವಠಾರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿ ಮುಂದಕ್ಕೆ ಈ ರಸ್ತೆ ಬದಲಾಗಲಿದೆ. ಸಣ್ಣ ಕಣಿಯಂತಿದ್ದ ಈ ರಸ್ತೆ ಅಗಲೀಕರಣ ಮಾಡುವಲ್ಲಿ ಸ್ಥಳೀಯ ಜಾಗದವರ ವಿರೋಧವಿದ್ದ ಹಿನ್ನೆಲೆಯಲ್ಲಿ ಯಾವ ಜನಪ್ರತಿನಿಧಿಯೂ ಇದರ ವಿವಾದಕ್ಕೆ ಕೈ ಹಾಕಿರಲಿಲ್ಲ. ಕಳೆದ ಕೆಲವು ತಿಂಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು ರಸ್ತೆಯ ಎರಡೂ ಬದಿಗಳಲ್ಲಿರುವ ಖಾಸಗಿ ಜಾಗದ ಮಾಲಿಕರ ಜೊತೆ ಸೌಹಾರ್ಧಯುತ ಮಾತುಕತೆ ನಡೆಸಿದಾಗ ರಸ್ತೆ ಅಗಲೀಕರಣ ಮಾಡಲು ಒಪ್ಪಿಗೆ ನೀಡಿದ್ದಾರೆ.


ಈ ರಸ್ತೆ ಆಗ್ತದೆ ಎಂದು ನಾವು ಕನಸಲ್ಲೂ ಗ್ರಹಿಸಿರಲಿಲ್ಲ. ಶಾಸಕ ಅಶೋಕ್ ರೈ ಅವರಲ್ಲಿ ಮನವಿ ಮಾಡಿದಾಗ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ವಿವಾದವನ್ನು ಬಗೆಹರಿಸಿ ನಮಗೆ ರಸ್ತೆ ಸೌಭಾಗ್ಯವನ್ನು ಒದಗಿಸಿದ್ದಾರೆ ಇದು ನಮ್ಮ ಜೀವನದಲ್ಲಿ ಮರೆಯಲಾಗದ ಘಟನೆ. ಈ ಹಿಂದಿನ ಶಾಸಕರು ನಮಗೆ ಭರವಸೆ ಮಾತ್ರ ಕೊಟ್ಟಿದ್ದರೇ ವಿನಾ ಯಾವುದೇ ಮುತುವರ್ಜಿವಹಿಸಲಿಲ್ಲ. ಅಶೋಕ್ ರೈ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ಮುಂದೆಯೂ ಇಂಥವರೇ ಶಾಸಕರಾಗಿರಬೇಕೆಂಬುದೇ ನಮ್ಮ ಈ ಭಾಗದ ಜನರ ಕನಸು.
-ಜೀವನ್, ರಸ್ತೆ ಫಲಾನುಭವಿ


ಈ ರಸ್ತೆಯಲ್ಲಿ ರಕ್ತೇಶ್ವರಿ ವಠಾರದ ಮಂದಿ ತೆರಳುತ್ತಿದ್ದರು, ಆದರೆ ಇದು ರಸ್ತೆಯಾಗಿರಲಿಲ್ಲ, ಕಾಲು ದಾರಿಯಂತಿತ್ತು. ಮಳೆಗಾಲದಲ್ಲಿ ಇಲ್ಲಿ ನೀರು ನಿಂತು ಮಕ್ಕಳಿಗೆ, ವೃದ್ದರಿಗೆ, ಮಹಿಳೆಯರಿಗೆ ನಡೆದುಕೊಂಡು ಹೋಗುವುದಕ್ಕೂ ಕಷ್ಟವಾಗಿತ್ತು. ರಸ್ತೆ ವಿವಾದ ಮಾಡುವಲ್ಲಿ ಸಣ್ಣ ತಕರರಾರಿತ್ತು. ಪಕ್ಕದ ಜಾಗದವರ ಜೊತೆ ಮಾತುಕತೆ ನಡೆಸಿದಾಗ ಅವರು ಒಪ್ಪಿಕೊಂಡಿದ್ದಾರೆ. ರಸ್ತೆ ಮಾಡುವುದಕ್ಕೆ ಯಾರೂ ವಿರೋಧ ಮಾಡಿಲ್ಲದ ಕಾರಣ ರಸ್ತೆ ನಿರ್ಮಾಣದ ಹಾದಿ ಸುಗಮವಾಗಿದೆ. ಮುಂದೆ ಇದು ಸಂಚಾರ ಯೋಗ್ಯವಾದ ಕಾಂಕ್ರೀಟ್ ರಸ್ತೆಯಾಗಲಿದೆ, ಬಹುವರ್ಷದ ಬೇಡಿಕೆ ಈಡೇರಿದ ಖುಷಿಯಲ್ಲಿ ಜನರಿದ್ದಾರೆ ಅದುವೇ ನನಗೆ ದೊಡ್ಡ ಖುಷಿ
-ಅಶೋಕ್ ರೈ, ಶಾಸಕರು ಪುತ್ತೂರು

Leave a Reply

Your email address will not be published. Required fields are marked *

error: Content is protected !!