ಪುತ್ತೂರು ಸುನ್ನೀ ಫೌಂಡೇಶನ್ ವತಿಯಿಂದ ಕುಂಬ್ರ ಮರ್ಕಝ್ ಬೆಳ್ಳಿಹಬ್ಬ ಪ್ರಯುಕ್ತ ವಿವಿಧ ಕಾರ್ಯಕ್ರಮ
ಪುತ್ತೂರು: ಪುತ್ತೂರು ಸುನ್ನೀ ಫೌಂಡೇಶನ್ ಇದರ ಸಭೆ ಕುಂಬ್ರ ಮರ್ಕಝುಲ್ ಹುದಾದಲ್ಲಿ ನಡೆಯಿತು.
ಸಭೆಯಲ್ಲಿ ಸಿಲ್ವರ್ ಜ್ಯೂಬಿಲಿ ಆಚರಣೆಯ ಹಂತದಲ್ಲಿರುವ ಕುಂಬ್ರ ಮರ್ಕಝ್ ಕಾಲೇಜಿನ 25ನೇ ವಾರ್ಷಿಕ ಸಮ್ಮೇಳನದ ಭಾಗವಾಗಿ 25 ಬಡ ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್ ವಿತರಣೆ, 25 ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಗುರುತಿಸಿ ಅವರಿಗೆ ಗೌರವ ಕಿಟ್ ನೀಡುವುದು, 25 ಮೊಹಲ್ಲಾಗಳಲ್ಲಿ ಸಮ್ಮೇಳನದ ಕಟೌಟ್ ಅಳವಡಿಸುವುದು, 25 ರೋಗಿಗಳಿಗೆ ಔಷಧ ವಿತರಣೆ ಮತ್ತು ಸಮ್ಮೇಳನ ಪ್ರಯುಕ್ತ ಬರಹ ಸ್ಪರ್ಧೆ ನಡೆಸಲು ತಿರ್ಮಾನಿಸಲಾಯಿತು.
ಪಿಎಸ್ಎಫ್ ಅಧ್ಯಕ್ಷ ಸಿದ್ದೀಕ್ ಮುಸ್ಲಿಯಾರ್ ಕುಂಡಡ್ಕ
ಅಧ್ಯಕ್ಷತೆ ವಹಿಸಿದ್ದರು. ಪಿಎಸ್ಎಫ್ ನಿರ್ದೇಶಕ ಅಬೂಬಕ್ಕರ್ ಸಅದಿ ಮಜೂರು, ಉಪಾಧ್ಯಕ್ಷ ಕೆ.ಇ ಅಬೂಬಕ್ಕರ್, ಮೂಸಾ ಚೆಲ್ಯಡ್ಕ, ಕೋಶಾಧಿಕಾರಿ ಮುಹಮ್ಮದ್ ಮೈದಾನಿಮೂಲೆ, ಸಾಂತ್ವನ ವಿಭಾಗದ ಕಾರ್ಯದರ್ಶಿ ರಫೀಕ್ ಸಖಾಫಿ ಬಳ್ಳಾರಿ, ಕಾರ್ಯದರ್ಶಿ ಅಝೀಝ್ ರಝ್ವಿ ಮಾಡಾವು, ಅಬ್ದುರ್ರಹ್ಮಾನ್ ಮದನಿ ಬನ್ನೂರು ಮೊದಲಾದವರು ಸಾಂದರ್ಭಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಹಂಝ ಸರ್ವೆ ಸ್ವಾಗತಿಸಿದರು.


