ತೆಂಗಿನಕಾಯಿ ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ: ಚಾಲಕ ಮೃತ್ಯು
ಪುತ್ತೂರು: ತೆಂಗಿನಕಾಯಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಡಿಂಬಾಡಿ ಅರ್ಬಿ ಸಮೀಪ ನಡೆದಿದೆ.

ಮೃತ ಚಾಲಕನನ್ನು ಪುತ್ತೂರಿನ ಬನ್ನೂರಿನ ಚೆಲುವಮ್ಮನಕಟ್ಟೆ ನಿವಾಸಿ ಶಿವಪ್ರಸಾದ್ ಎಂದು ಗುರುತಿಸಲಾಗಿದೆ.
ತೆಂಗಿನಕಾಯಿ ಲೋಡ್ ಮಾಡಿಕೊಂಡು ಅರ್ಬಿ ಬಳಿ ಪಿಕಪ್ ಪಲ್ಟಿಯಾಗಿದೆ. ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.


