ಕರಾವಳಿ

ಸುಳ್ಯ: ಕಾರು-ಲಾರಿ ನಡುವೆ ಭೀಕರ ಅಪಘಾತ, ಬಾಲಕ ಮೃತ್ಯು, ಇಬ್ಬರು ಗಂಭೀರ

ಸುಳ್ಯ: ರಾಷ್ಟ್ರೀಯ ಹೆದ್ದಾರಿ 275ರ ಗೂನಡ್ಕ ಶಾಲೆಯ ಬಳಿ ಕಾರು ಮತ್ತು ಲಾರಿ ನಡುವೆ ಅ.25ರಂದು ಭೀಕರ ಅಪಘಾತ ಸಂಭವಿಸಿ, ಬಾಲಕ ಮೃತಪಟ್ಟಿದ್ದು ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಾರಿನಲ್ಲಿದ್ದವರು ಪುಣಚ ಮೂಲದವರು ಎನ್ನಲಾಗಿದೆ. ಗಾಯಾಳುಗಳು ಮತ್ತು ಮೃತ ಬಾಲಕನ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

Leave a Reply

Your email address will not be published. Required fields are marked *

error: Content is protected !!