ಈಶ್ವರಮಂಗಲ ಮಖಾಂ ಉರೂಸ್ ದಿನಾಂಕ ಘೋಷಣೆ
ಪುತ್ತೂರು: ಈಶ್ವರಮಂಗಲ ಮಖಾಂ ಉರೂಸ್ ಕಾರ್ಯಕ್ರಮದ ದಿನಾಂಕ ಘೋಷಣೆಯಾಗಿದೆ. ಎನ್.ಪಿ.ಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈಶ್ವರಮಂಗಲ ಮಖಾಂ ಉರೂಸ್ ದಿನಾಂಕ ಪ್ರಕಟಿಸಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

2027 ಏ.2ರಿಂದ ಏ.8ರವರೆಗೆ ಉರೂಸ್ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಮಾಅತ್ ಪದಾಧಿಕಾರಿಗಳು, ಪಿಟಿಎ ಮತ್ತು ಎಚ್.ಐ.ಓ.ಎಸ್.ಎಫ್ ಪದಾಧಿಕಾರಿಗಳು, ಶಿಕ್ಷಕರು, ಪೋಷಕರು, ಜಮಾಅತರು ಉಪಸ್ಥಿತರಿದ್ದರು.

