ಅಶೋಕ ಜನ-ಮನ–2026: 10 ಬಡ ಸಾಧಕರಿಗೆ ಸನ್ಮಾನ
ಪುತ್ತೂರು: ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ಪ್ರವರ್ತಕ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಸಾರಥ್ಯದಲ್ಲಿ ದೀಪಾವಳಿ ಪ್ರಯುಕ್ತ “ಅಶೋಕ ಜನ-ಮನ–2026” ಕಾರ್ಯಕ್ರಮದ ಅಂಗವಾಗಿ ವಸ್ತ್ರ ವಿತರಣೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ನ.8ರಂದು ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ 10 ಬಡ ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಲು ಉದ್ದೇಶಿಸಲಾಗಿದೆ.
ಕೃಷಿ, ಹೈನುಗಾರಿಕೆ, ಬೀಡಿ ಕಟ್ಟುವಿಕೆ, ನಾಟಿ ವೈದ್ಯಕೀಯ, ಕೂಲಿ ಕೆಲಸ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರು, ಅನಾರೋಗ್ಯಪೀಡಿತ ಹೆತ್ತವರನ್ನು ಆರೈಕೆ ಮಾಡುತ್ತಿರುವ ಮಕ್ಕಳು, ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿರುವವರನ್ನು ಆರೈಕೆ ಮಾಡುತ್ತಿರುವ ಪೋಷಕರು, ಬುಟ್ಟಿ ಹೆಣೆದು ಜೀವನ ಸಾಗಿಸುತ್ತಿರುವ ಕೊರಗ ಸಮುದಾಯದ ಸಾಧಕರು, ಸೇವಾ ಮನೋಭಾವದ ಆಟೋ ಚಾಲಕರು ಸೇರಿದಂತೆ ಸಮಾಜದ ಕಟ್ಟಕಡೆಯಲ್ಲಿದ್ದು ವಿಶಿಷ್ಟ ಸಾಧನೆ ಮಾಡುತ್ತಿರುವವರ ಮಾಹಿತಿಯನ್ನು ಆಹ್ವಾನಿಸಲಾಗಿದೆ.
ತಮ್ಮ ಗ್ರಾಮ ಅಥವಾ ಪರಿಸರದಲ್ಲಿರುವ ಇಂತಹ ಸಾಧಕರ ಸಂಕ್ಷಿಪ್ತ ಮಾಹಿತಿಯನ್ನು ಅ.31ರೊಳಗೆ ಸನ್ಮಾನ ಸಮಿತಿಗೆ ನೀಡುವಂತೆ ಮನವಿ ಮಾಡಲಾಗಿದೆ. ಸಂಪರ್ಕ:
📞 8105672143
📞 9008149987
📞 8296915918
ಸುದೇಶ್ ಆರ್. ಶೆಟ್ಟಿ, ಶಾಂತಿನಗರ
ಕಾರ್ಯಾಧ್ಯಕ್ಷರು, ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ.), ಪುತ್ತೂರು

