ಕರಾವಳಿ

ನೀಟ್ ಯುಜಿ ಪರೀಕ್ಷೆಯಲ್ಲಿ ಸಾಧನೆ: ಮುಹಮ್ಮದ್ ಅಯಾನ್‌ಗೆ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಸನ್ಮಾನ


ಪುತ್ತೂರು: ನೀಟ್ ಯುಜಿ 2026 ಪರೀಕ್ಷೆಯಲ್ಲಿ ವಿದೇಶಿ ಅಭ್ಯಥಿಗಳ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ವಿಟ್ಲ ಸಮೀಪದ ಮುಹಮ್ಮದ್ ಅಯಾನ್ ಯೂಸುಫ್ ಕೊಳ್ನಾಡು ಅವರನ್ನು ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಮಂಗಳೂರಿನಲ್ಲಿ ಪ್ರೇರಣಾ ತರಬೇತುದಾರ ರಫೀಕ್ ಮಾಸ್ಟರ್ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.



ತರಬೇತುದಾರ ರಫೀಕ್ ಮಾಸ್ಟರ್ ಮಾತನಾಡಿ ಮುಹಮ್ಮದ್ ಅಯಾನ್ ಯೂಸುಫ್ ಕೊಳ್ನಾಡು ಅವರ ಸಾಧನೆ ನಮಗೆಲ್ಲಾ ಹೆಮ್ಮೆ ಮತ್ತು ಅಭಿಮಾನ ತಂದಿದೆ, ಇವರು ಭವಿಷ್ಯದಲ್ಲಿ ಎಂಬಿಬಿಎಸ್ ಮುಗಿಸಿ ಸೂಪರ್ ಸ್ಪೆಷಾಲಿಟಿ ಆಗಿ ದೊಡ್ಡ ವೈದ್ಯರಾಗಿ ಈ ಸಮಾಜಕ್ಕೆ ಸೇವೆ ನೀಡಲಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.



ಈ ಸಂದರ್ಭದಲ್ಲಿ ಭಾರತರತ್ನ ಡಾ.ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್‌ನ ಅಧ್ಯಕ್ಷ ಅಬ್ದುಲ್ ಮಜೀದ್ ಹಾಜಿ ಸಿತಾರ್, ಬ್ರಿಡ್ಜ್‌ಸ್ಟೋನ್ ಬಿಲ್ಡರ‍್ಸ್‌ನ ಮುಸ್ತಫಾ ಇಂಜಿನಿಯರ್, ಸೆಕ್ಯೂರ್ ಇಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಪ್ರೈ.ಲಿ ಇದರ ಆಡಳಿತ ನಿರ್ದೇಶಕ ಸಿದ್ದೀಕ್ ಕುಳಾಯಿ, ಗೋಲ್ಡ್‌ಸೂಕ್ ಕಂಕನಾಡಿ ಇದರ ಆಡಳಿತ ನಿರ್ದೇಶಕ ಆಸಿಫ್, ಕಿರ್ಗಿಸ್ತಾನ್ ಯೆನೆಪೋಯ ಮೆಡಿಕಲ್ ಕಾಲೇಜಿನ ಉಪನ್ಯಾಸಕ ಅನ್ವರ್ ಸೂಫಿ ಅಮ್ಮೆಮಾರ್, ಪ್ರೀಮಿಯರ್ ಫುಡ್&ಬೆವರೇಜಸ್ ಇದರ ಆಡಳಿತ ನಿರ್ದೇಶಕರಾದ ನಿಷ್ರತ್, ಹಫೀಝ್ ಅಡ್ಡೂರು, ಫಹದ್, ಸನ್ಮಾನಿತಗೊಂಡ ಮುಹಮ್ಮದ್ ಅಯಾನ್ ಯೂಸುಫ್ ಕೊಳ್ನಾಡು ಅವರ ತಂದೆ ಅಬ್ದುಲ್ ಸಮದ್ ಕೊಳ್ನಾಡು, ತಾಯಿ ನುಸೈಬಾ ಸಿ.ಎ, ಸಹೋದರ ಝಿದಾನ್ ಉಪಸ್ಥಿತರಿದ್ದರು,
ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್‌ನ ಚೇರ್‌ಮೆನ್ ಅಮ್ಜದ್ ಖಾನ್ ಪೋಳ್ಯ, ಅನಿವಾಸಿ ಉದ್ಯಮಿ ಫಾರೂಕ್ ಹಾಜಿ ಕನ್ಯಾನ ಪೋರ್ಟ್‌ವೇ, ವೋಲ್ವಿಟೆಕ್ ಸಾಫ್ಟ್‌ವೇರ್ ಸೊಲ್ಯೂಷನ್ಸ್‌ನ ಸಿಇಒ ಶೇಖ್ ಮೊದೀನ್ ಮೊದಲಾದವರು ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!