ಕರಾವಳಿ

ವಿಟ್ಲ: ಮೇಗಿನಪೇಟೆಯಲ್ಲಿ ಭಾರತ್ ಡಿಜಿಟಲ್ ಸೇವಾ ಕೇಂದ್ರ ಶುಭಾರಂಭ

ವಿಟ್ಲ: ಯಾವುದೇ ಸಂಸ್ಥೆ ಬೆಳೆಯಲು ಶ್ರಮ, ಪ್ರಾಮಾಣಿಕತೆ ಅಗತ್ಯ. ಪ್ರಾಮಾಣಿಕತೆಯಿಂದ ಮಾಡಿದ ಕೆಲಸದಲ್ಲಿ ಯಶಸ್ಸು ಹೆಚ್ಚು. ಬೆಳೆಯುತ್ತಿರುವ ವಿಟ್ಲಕ್ಕೆ ಇಂತಹ ಸಂಸ್ಥೆ ಅತೀ ಅಗತ್ಯ  ಎಂದು ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟು ಹೇಳಿದರು.

 ವಿಟ್ಲ ಮೇಗಿನಪೇಟೆಯಲ್ಲಿ ಸೆ.3ರಂದು ಆರಂಭಗೊಂಡ ಭಾರತ್ ಡಿಜಿಟಲ್ ಸೇವಾ ಕೇಂದ್ರ ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು‌.

ಕೊಡಾಜೆ ಜುಮಾ‌ ಮಸೀದಿಯ ಖತೀಬರಾದ  ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ ಇಂಡಿಯಾವನ್ನು ಡಿಜಿಟಲ್ ಮಾಡಲು ಸರಕಾರ ಪ್ರಯತ್ನ ಮಾಡುತ್ತಿದೆ‌. ಈ ನಿಟ್ಟಿನಲ್ಲಿ ಇಂತಹ ಸಂಸ್ಥೆ ಅತೀ ಅಗತ್ಯ.  ಡಿಜಿಟಲ್ ಇಂಡಿಯಾ ದೇಶ ಬೆಳವಣಿಗೆಯ ಭಾಗವಾಗಿದೆ. ಸೇವೆ ಎಂದರೆ ಅದು ವಿಶ್ವಾಸದಿಂದ ಕೂಡಿರಬೇಕು. ಒಮ್ಮೆ ಬಂದ ಗ್ರಾಹಕರು ಇನ್ನೊಮ್ಮೆ ಬರುವಂತಾಗಬೇಕು. ಜಾತಿ ಮತ ಮರೆತು ಸೇವೆ ನೀಡುವ ಕೆಲಸ ನಮ್ಮದಾಗಬೇಕು ಎಂದರು.



ಭಾರತ್ ಗ್ರೂಪ್‌ನ ಪಾಲುದಾರರಾದ ಹರೀಶ್ ಎಂ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು‌.
ವಿಟ್ಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್  ಪ್ರಕಾಶ್ ದೇವಾಡಿಗ, ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಅಝೀಝ್ ಸನ,  ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬರಾದ  ಹಾರಿಸ್ ಬಾಖವಿ, ಸಾಮಾಜಿಕ ಮುಖಂಡ ಶಾಕೀರ್ ಅಳಕೆಮಜಲು, ಐಕ್ಯ ವೇದಿಕೆ ಅಧ್ಯಕ್ಷ ಹನೀಫ್ ಬಗ್ಗುಮೂಲೆ, ವೈಫ್ರೆಂಡ್ಸ್  ನ ಸಿದ್ದಿಕ್ ಸೂರ್ಯ, ಪಂತಡ್ಕ ಮದರಸದ ಅಧ್ಯಾಪಕರಾದ ಜಾಫರ್ ಸಾದಿಕ್ ಪೈಝಿ ಮೊದಲಾದವರು ಶುಭ ಹಾರೈಸಿದರು. ಪತ್ರಕರ್ತ ಲತೀಪ್ ನೇರಳಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಶ್ರಫ್ ಭಾರತ್ ವಂದಿಸಿದರು‌.



ಎಲ್ಲವೂ ಒಂದೇ ಸೂರಿನಲ್ಲಿ:
ಸಂಸ್ಥೆಯಲ್ಲಿ ಎಲ್ಲಾ ವಿಧದ ಆನ್ ಲೈನ್ ಸೇವೆಗಳು, ವಾಹನಗಳ ವಾಯುಮಾಲಿನ್ಯ ತಪಾಸಣೆ, ವಾಹನಗಳ ಇನ್ಶ್ಯೂರೆನ್ಸ್, ಬಸ್ಸು, ವಿಮಾನ, ರೈಲುಗಳ ಟಿಕೇಟ್ ಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8951271449 , 6360943710 ಯನ್ನು ಸಂಪರ್ಕಿಸಬಹುದಾಗಿದೆ.



ಉಚಿತ ಟೀಶರ್ಟ್:
ಸಂಸ್ಥೆಯ ಶುಭಾರಂಭದ  ಪ್ರಯುಕ್ತ ಸೆ.3ರಿಂದ ಸೆ.5ರ ವರೆಗೆ ಸಂಸ್ಥೆಯಲ್ಲಿ ವಾಹನಗಳ ಇನ್ಸೂರೆನ್ಸ್ ಹಾಗೂ ವಾಹನಗಳ ವಾಯುಮಾಲಿನ್ಯ ತಪಾಸಣೆ ಮಾಡಿಸುವವರಿಗೆ ಉಚಿತವಾಗಿ ಟೀ ಶರ್ಟ್ ಲಭಿಸಲಿದೆ.

Leave a Reply

Your email address will not be published. Required fields are marked *

error: Content is protected !!