ಕರಾವಳಿ

ಸಾರೆಪುಣಿ: ಮೃತ ಫಾತಿಮತ್ ಇಶಾನಾ ಮನೆಗೆ ಕೆದಂಬಾಡಿ ವಲಯ ಕಾಂಗ್ರೆಸ್ ಪದಾಧಿಕಾರಿಗಳು ಭೇಟಿ


ಪುತ್ತೂರು: ಪತಿಯ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಸಾರೆಪುಣಿಯ ಫಾತಿಮತ್ ಇಶಾನಾ ಮನೆಗೆ ಕೆದಂಬಾಡಿ ವಲಯ ಕಾಂಗ್ರೆಸ್ ಪದಾಧಿಕಾರಿಗಳು ಭೇಟಿ ನೀಡಿ ಮೃತರ ಮನೆಯವರಿಗೆ ಸಾಂತ್ವನ ಹೇಳಿದರು.

ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರು,
ಕಾರ್ಯದರ್ಶಿ ಮೊಹಮ್ಮದ್ ನೌಷಾದ್ ತಿಂಗಳಾಡಿ, ಕೆದಂಬಾಡಿ ಗ್ರಾ.ಪಂ ಮಾಜಿ ಸದಸ್ಯ ಮೆಲ್ವಿನ್ ಮೊಂತೆರೋ,
ವಲಯ ಪದಾಧಿಕಾರಿಗಳಾದ ಸೋಮ್ಮಯ್ಯ ತಿಂಗಳಾಡಿ ಮತ್ತು ಅಶ್ರಫ್ ಸಾರಪುಣಿ, ಬೂತ್ ಅಧ್ಯಕ್ಷರಾದ ಸದಾಶಿವ ರೈ ಮತ್ತು ಹೈದರ್ ಗಟ್ಟಮನೆ, ಕಾಂಗ್ರೆಸ್ ಕಾರ್ಯಕರ್ತರಾದ ಖಾದರ್ ಮತ್ತು ಝಕೀರ್ ಉಪಸ್ಥಿತರಿದ್ದರು. ಫಾತಿಮತ್ ಇಶಾನಾ ಅವರು ಪತಿಯ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ವಿಚಾರ ನಮಗೆಲ್ಲಾ  ಬಹಳ ನೋವು  ತಂದಿದೆ, ಘಟನೆ ಬಗ್ಗೆ ಪೊಲೀಸರು ಕೂಲಂಕುಷ ತನಿಖೆ ನಡೆಸುವ ಮೂಲಕ ಮೃತರ ಕುಟುಂಬಸ್ಥರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರು ತಿಳಿಸಿದರು.

 

Leave a Reply

Your email address will not be published. Required fields are marked *

error: Content is protected !!