ಕರಾವಳಿಕ್ರೈಂ

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಆರೋಪಿ ವಶಕ್ಕೆ



ಕಡಬ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಜೀವ ಬೆದರಿಕೆ ಹಾಕಿದ ಆರೋಪದಡಿ ಯುವಕನೊಬ್ಬನನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ


ಮಾಹಿತಿ ಪ್ರಕಾರ, ಪ್ರಕರಣದ ದೂರುದಾರರ ಅಪ್ರಾಪ್ತ ಪುತ್ರಿ ಜುಲೈ 7ರಂದು ಕಡಬ ತಾಲೂಕಿನ ಏನೆಕಲ್ಲಿನಲ್ಲಿರುವ ತನ್ನ ಸ್ನೇಹಿತೆಯ ಮನೆಗೆ ತೆರಳಿದ್ದು, ಜುಲೈ 9ರಂದು ಮನೆಗೆ ಮರಳಿದ್ದಳು. ಈ ನಡುವೆ ಜುಲೈ 8ರಂದು ಮಧ್ಯಾಹ್ನ ಸ್ನೇಹಿತೆಯ ಮನೆಯಲ್ಲಿ ಇದ್ದ ವೇಳೆ, ಮೋಕ್ಷಿತ್ ಎಂಬ ಆರೋಪಿ ಬಾಲಕಿಯನ್ನು ಮನೆ ಸಮೀಪಕ್ಕೆ ಕರೆದುಕೊಂಡು ಹೋಗಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದು, ವಿಷಯವನ್ನು ಬಹಿರಂಗಪಡಿಸಿದರೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

 



ದೂರಿನ ಆಧಾರದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 29/2026 ದಾಖಲಿಸಿಕೊಂಡು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 65(1), 351(2) ಹಾಗೂ ಪೊಕ್ಸೊ ಕಾಯ್ದೆಯ ಕಲಂ 4ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!