ಕರಾವಳಿ

ಪುತ್ತೂರು ದಾರುಲ್ ಹಸನಿಯಾ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಸ್ವಾಗತ ಸಮಿತಿ ರಚನೆ
 

ಪುತ್ತೂರು: ಇಲ್ಲಿನ ಎಜು-ಪಾರ್ಕ್‌ನಲ್ಲಿರುವ ದಾರುಲ್ ಹಸನಿಯ್ಯ ಅಕಾಡೆಮಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಆ.19ರಂದು ನಡೆಯಲಿದ್ದು, ಅದರ ಪೂರ್ವಭಾವಿ ಸಿದ್ಧತೆಗಾಗಿ 313 ಮಂದಿಯ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಗಲ್ಫ್ ಉದ್ಯಮಿ ಫಾರೂಕ್ ಹಾಜಿ ಫೋರ್ಟ್‌ವೇ, ಪ್ರಧಾನ ಕಾರ್ಯದರ್ಶಿಯಾಗಿ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ಪುತ್ತೂರು, ಕೋಶಾಧಿಕಾರಿಯಾಗಿ ಉಮರ್ ಹಾಜಿ ಕೋಡಿಂಬಾಡಿ ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ರಫೀಕ್ ಹಾಜಿ ಸುಲ್ತಾನ್ ಕೊಡಾಜೆ, ಫೈರೋಝ್ ಹಾಜಿ ಪರ್ಲಡ್ಕ, ಆಸಿಫ್ ಹಾಜಿ ದರ್ಬೆ, ತಹ್ಸೀರ್ ದರ್ಬೆ, ಹುಸೈನ್ ಹಾಜಿ ಕೋಡಿಂಬಾಡಿ, ಹಾಜಿ ಅಬ್ದುಲ್ ರಹಿಮಾನ್ ಅಝಾದ್ ದರ್ಬೆ, ಬಶೀರ್ ಹಾಜಿ ದರ್ಬೆ, ಬಶೀರ್ ಹಾಜಿ ದಾರಂದಕುಕ್ಕು, ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಎಂ.ಎಸ್ ಹಮೀದ್ ಪುಣಚ, ಅಬ್ದುಲ್ ಅಝೀಝ್ ಹಾಜಿ ಮೊಟ್ಟೆತ್ತಡ್ಕ ಆಯ್ಕೆಯಾದರು. ಜೊತೆ ಕಾರ್ಯದರ್ಶಿಗಳಾಗಿ ರಿಯಾಝ್ ಇಂಜಿನಿಯರ್, ಶಾಫಿ ಇಂಜಿನಿಯರ್ ಪಾಪೆತ್ತಡ್ಕ, ಅಬ್ದುರ್ರಝಾಕ್ ಅಝ್ಹರಿ, ಅಶ್ರಫ್ ರಹ್ಮಾನಿ ಪಡೀಲ್, ರಶೀದ್ ರಹ್ಮಾನಿ, ನೌಫಲ್ ಅಜ್ಜಿಕ್ಕಲ್, ನೌಶಾದ್ ಹಾಜಿ ಬೊಳ್ವಾರ್, ಶರೀಫ್ ಮೂಸ ಕುದ್ದುಪದವು, ಝೈನುದ್ದೀನ್ ಹಾಜಿ ಮುಕ್ವೆ, ಇಸ್ಮಾಯಿಲ್ ಸಾಲ್ಮರ, ಜಮಾಲ್ ಹಾಜಿ ಮುಕ್ವೆ, ಶಾಕಿರ್ ಕೂರ್ನಡ್ಕ, ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ಅಬ್ದುಲ್ ರಹಿಮಾನ್ ಹಾಜಿ ಬೈಪಾಸ್ ಆಯ್ಕೆಯಾದರು.

ವಿವಿಧ ಉಪಸಮಿತಿಗಳನ್ನು ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಅರ್ಶದ್ ದರ್ಬೆ, ಅಫ್ಹಮ್ ಅಲಿ ತಂಙಳ್, ಮುಸ್ತಫಾ ಯಾಸೀನ್, ಬಾತಿಷಾ ಹಾಜಿ ಪಾಟ್ರಕೋಡಿ, ಯೂಸುಫ್ ರೆಂಜಲಾಡಿ, ಝೈನುದ್ದೀನ್ ಪುತ್ತೂರು, ಅಶ್ರಫ್ ಮುಕ್ವೆ, ಇಸ್ಮಾಯಿಲ್ ತಂಙಳ್, ಅಬೂಬಕ್ಕರ್ ಮುಲಾರ್ ಮೊದಲಾದವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.





ಎಜು-ಪಾರ್ಕ್ ದಾರುಲ್ ಹಸನಿಯಾ ಅಕಾಡೆಮಿ ಸಭಾಂಗಣದಲ್ಲಿ ಸಯ್ಯಿದ್ ಯಹ್ಯಾ ತಂಙಳ್ ಸಾಲ್ಮರ ಅವರ ಅಧ್ಯಕ್ಷತೆಯಲ್ಲಿ ಜು.14ರಂದು ಸ್ವಾಗತ ಸಮಿತಿ ರಚನಾ ಸಭೆ ನಡೆಯಿತು. ಕಾರ್ಯಕ್ರಮವನ್ನು ‘ಸಮಸ್ತ’ ಕೇಂದ್ರ ಮುಶಾವರ ಸದಸ್ಯರಾದ ಉಸ್ಮಾನುಲ್ ಫೈಝಿ ತೋಡಾರ್ ಉದ್ಘಾಟಿಸಿದರು. ಸಯ್ಯಿದ್ ಪೂಕುಂಞಿ ತಂಙಳ್ ಉದ್ಯಾವರ ಪ್ರಾರ್ಥನೆಗೆ ನೇತೃತ್ವ ನೀಡಿದರು. ಸಯ್ಯಿದ್ ಅಕ್ರಮ್ ಅಲಿ ತಂಙಳ್ ರಹ್ಮಾನಿ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಫಾರೂಕ್ ಹಾಜಿ ಪೋರ್ಟ್‌ವೇ, ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಹಾಜಿ ಅಬ್ದುಲ್ ರಹಿಮಾನ್ ಅಝಾದ್ ಮೊದಲಾದವರು ಮಾತನಾಡಿದರು. ಸಭೆಯಲ್ಲಿ ಸಂಸ್ಥೆಯ ಮುಖಂಡರಾದ ಆಸಿಫ್ ಹಾಜಿ ದರ್ಬೆ, ಹಸನ್ ಹಾಜಿ ಸಿಟಿ ಬಝಾರ್, ಫೈರೋಝ್ ಹಾಜಿ ಪರ್ಲಡ್ಕ, ರಿಯಾಝ್ ಇಂಜಿನಿಯರ್ ಪರ್ಲಡ್ಕ, ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ಶರೀಫ್ ಹಾಜಿ ಕೊಡಾಜೆ, ಉಮರ್ ಹಾಜಿ ಸಂಪ್ಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಅಬ್ಬಾಸ್ ಮದನಿ ಗಟ್ಟಮನೆ, ಹಸನ್ ಅರ್ಶದಿ ಕಲ್ಲೇಗ, ಹಸನ್ ಬಾಖವಿ ಓಲೆಮುಂಡೋವು, ಅಬ್ದುಲ್ ಲತೀಫ್ ಹನೀಫಿ ಸಂಟ್ಯಾರ್, ಸಿದ್ದೀಕ್ ಫೈಝಿ ಮುಕ್ರಂಪಾಡಿ, ಅಬ್ದುಲ್ ಖಾದರ್ ಮುಸ್ಲಿಯಾರ್, ಅಶ್ರಫ್ ರಹ್ಮಾನಿ ಪಡೀಲ್, ಆಸಿಫ್ ಫೈಝಿ ಕುಂತೂರು, ಅಬ್ದುಲ್ ರಝಾಕ್ ಅಝ್ಹರಿ ಸವಣೂರು, ಶಾಫಿ ಮದನಿ ಪರಣೆ, ತ್ವಾಹಿಫ್ ಫಾಲಿಲಿ, ಶಾಹಿರ್ ಯಮಾನಿ, ಶಾಕಿರ್ ಕೂರ್ನಡ್ಕ, ಬಶೀರ್ ಕೆಮ್ಮಿಂಜೆ, ಅಬೂಬಕ್ಕರ್ ಹಾಜಿ ಮಿತ್ತನಡ್ಕ, ಅಬ್ದುಲ್ ಸಲೀಂ ಕೂರ್ನಡ್ಕ, ಆಶಿಕ್ ಜುನೈದ್ ಕೂರ್ನಡ್ಕ, ಶಾಫಿ ಇಂಜಿನಿಯರ್ ಪಾಪತ್ತಡ್ಕ, ಝೈನುದ್ದೀನ್ ಹಾಜಿ ರೆಂಜಲಾಡಿ, ಸತ್ತಾರ್ ಬಲ್ನಾಡು, ಅಬ್ದುಲ್ ಹಮೀದ್ ಕೂರ್ನಡ್ಕ ಮೊದಲಾದ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ವ್ಯವಸ್ಥಾಪಕ ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಸ್ವಾಗತಿಸಿದರು. ಕೆ.ಎಂ.ಎ ಕೊಡುಂಗಾಯಿ ವಿವಿಧ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!