ಕರಾವಳಿ

ವಿಟ್ಲ: ಎಜುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ ವತಿಯಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಎಜುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ ವಿಟ್ಲ ಇದರ ವತಿಯಿಂದ ವಿಟ್ಲ ಹೋಬಳಿಯ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ  ಶೇ.90 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಒಕ್ಕೆತ್ತೂರು ಗೋಲ್ಡನ್ ವಿಲ್ಲಾದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ 48 ವಿದ್ಯಾರ್ಥಿಗಳನ್ನು ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಲಾಯಿತು. ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.97 ಕ್ಕಿಂತ ಅಧಿಕ ಅಂಕ ಪಡೆದ 7 ವಿದ್ಯಾರ್ಥಿಗಳಿಗೆ EEF ಕೋಶಾಧಿಕಾರಿ ಶಂಸುದ್ದೀನ್ ಬೈರಿಕಟ್ಟೆ ನಗದು ನೀಡಿ ಪ್ರೋತ್ಸಾಹಿಸಿ ಗೌರವಿಸಿದರು.
ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ ಎ ಗಫೂರ್,  ಸಿಎ ಅಬ್ದುಲ್ಲಾ ಮಾದುಮೂಲೆ, EEF ಕೋಶಾಧಿಕಾರಿ ಶಂಸುದ್ದೀನ್ ಬೈರಿಕಟ್ಟೆ, ಜಿಪಂ ಮಾಜಿ ಉಪಾಧ್ಯಕ್ಷ ಎಂಎಸ್ ಮಹಮ್ಮದ್, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿಜಿನಿಯರ್ ತಾಜುದ್ದೀನ್ ಉಬೈದ್, ಅನಿವಾಸಿ ಉದ್ಯಮಿ ಶರೀಫ್ ಮೇಗಿನಪೇಟೆ, ಬಂಟ್ವಾಳ ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯ ಸಿರಾಜ್ ಮದಕ, ಬಂಟ್ವಾಳ ತಾ.ಪಂ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ವಿಟ್ಲ ಎಲಿಮೆಂಟ್ಸ್ ಶಿಕ್ಷಣ ಸಂಸ್ಥೆಯ ಝಬೈರ್ ಮಾಸ್ಟರ್,  ಅನುಗ್ರಹ ಮಹಿಳಾ ಕಾಲೇಜಿನ ಟ್ರಸ್ಟಿ ಹೈದರ್ ನೀರ್ಕಜೆ, ಅಬ್ದುಲ್ ಹಮೀದ್ ಹಾಜಿ ದಾರುನ್ನಜಾತ್ ಕೊಡುಂಗಾಯಿ, ಅಬುಧಾಬಿಯ ಉದ್ಯಮಿ ಶಾಹುಲ್ ಹಮೀದ್ ಮೊದಲಾದವರು ಭಾಗವಹಿಸಿದ್ದರು.

 

ಖ್ಯಾತ  ಮೋಟಿವೇಶನಲ್ ಸ್ಪೀಕರ್ ರಫೀಕ್ ಮಾಸ್ಟರ್ ಅವರ ಪ್ರೇರಣಾದಾಯಾಕ ಭಾಷಣ ಸೇರಿದ್ದವರ ಗಮನ ಸೆಳೆಯಿತು.  ವಿದ್ಯಾರ್ಥಿಗಳಿಗೆ EEF ಸ್ಕಾಲರ್ಶಿಪ್ ಹಾಗೂ ಸರ್ಕಾರದಿಂದ ಸಿಗುವ ಸ್ಕಾಲರ್ಶಿಪ್ ನ ಬಗ್ಗೆ ಮಾಹಿತಿ ನೀಡಲಾಯಿತು. ಲಿಮ್ರಾ ಎಜು ಗ್ರೂಪ್ ಕರ್ನಾಟಕ ಇದರ ಅಧ್ಯಕ್ಷ ಶೇಖ್ ಇರ್ಪಾನಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ನಿಂದ ಆಗುವ ಅನಾಹುತದ ಬಗ್ಗೆ ಮಾಹಿತಿ ನೀಡಿದರು.



ವಿಟ್ಲ EEF ಮ್ಯಾನೇಜರ್ ಉಬೈದ್ ಕೆ ವಿಟ್ಲ ಸ್ವಾಗತಿಸಿದರು.
ಇಇಎಫ್ ಕೋಶಾಧಿಕಾರಿ ಜನಾಬ್ ಶಂಸುದ್ದೀನ್ ಬೈರಿಕಟ್ಟೆ ವಂದಿಸಿದರು. ಶ್ರೀಮತಿ ಆಶ್ರಾ ಅಳಿಕೆ ಹಾಗೂ ಬಲ್ಕೀಸ್ ಅಡ್ಯನಡ್ಕ ಕಾರ್ಯಕ್ರಮ ನಿರೂಪಿಸಿದರು. ಬಡ ಪ್ರತಿಭಾವಂತ ವಿದ್ಯಾರ್ಥಿಗಳು EEF ನ ಶೈಕ್ಷಣಿಕ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಎಜುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ ನ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!