ರಾಜ್ಯ

ವಿದ್ಯಾರ್ಥಿಗಳು ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನಷ್ಟೇ ಧರಿಸಬಹುದು: ಸಿದ್ದರಾಮಯ್ಯ



ಮೈಸೂರು: ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದೇ ಹೊರತು ಕೇಸರಿ ಶಾಲು ಹಾಕಿಕೊಳ್ಳಲು ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಾಂಪ್ರದಾಯಿಕವಾಗಿ ಅನುಸರಿಸುವ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಕೇಸರಿ ಶಾಲು ಧರಿಸುವಂತಿಲ್ಲ, ಆದರೆ ಜನಿವಾರ, ಉಡುದಾರ, ಹಿಜಾಬ್‌, ರುದ್ರಾಕ್ಷಿ ಹಾಕಿಕೊಂಡು ಬರಬಹುದು. ಅವರವರ ನಂಬಿಕೆಗಳಿಗೆ ಅನುವಾಗುವ ಆಚರಣೆಯಲ್ಲಿರುವ ಧಾರ್ಮಿಕ ಸಂಕೇತಗಳನ್ನಷ್ಟೇ ಹಾಕಿಕೊಳ್ಳಬಹುದು ಹೊಸದಾಗಿ ಹಾಕಿಕೊಳ್ಳುವಂತಿಲ್ಲ ಎಂದು ಹೇಳಿದರು

 

Leave a Reply

Your email address will not be published. Required fields are marked *

error: Content is protected !!