ಕರಾವಳಿ

ಕೆಯ್ಯೂರು: ಭಾರೀ ಗಾಳಿ-ಮಳೆ-ವಿಧವೆ ಮಹಿಳೆಯ ಮನೆಗೆ ಭಾರೀ ಹಾನಿ

ಪುತ್ತೂರು: ಮೇ.11ರಂದು ಸಂಜೆ ಸುರಿದ ಗಾಳಿ-ಮಳೆಗೆ ಕೆಯ್ಯೂರು ಗ್ರಾಮದ ಸಣಂಗಳ ನಿವಾಸಿ, ವಿಧವೆ ಲೀಲಾವತಿ ಯಶೋಧರ ಗೌಡ ಎಂಬುವವರ ವಾಸದ ಮನೆ ಸಂಪೂರ್ಣ ಜಖಂಗೊಂಡ ಬಗ್ಗೆ ವರದಿಯಾಗಿದೆ.



ಸಂಜೆ ವೇಳೆ ಧಾರಾಕಾರವಾಗಿ ಸುರಿದ ಮಳೆಯೊಂದಿಗೆ ಬೀಸಿದ ಪ್ರಬಲ ಗಾಳಿಗೆ ಮನೆಯ ಮೇಲ್ಚಾವಣಿಯ ಸಿಮೆಂಟ್ ಶೀಟ್‌ಗಳು ಹಾರಿಹೋಗಿವೆ. ಇದರಿಂದಾಗಿ ಮನೆಯೊಳಗೆ ಮಳೆನೀರು ನುಗ್ಗಿ ಅಕ್ಕಿ, ಬೇಳೆ ಸೇರಿದಂತೆ ದಿನಬಳಕೆಯ ಆಹಾರ ಸಾಮಗ್ರಿಗಳು ಹಾಗೂ ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ.

 


ಪತಿಯನ್ನು ಕಳೆದುಕೊಂಡು ವಿಧವೆಯಾಗಿರುವ ಲೀಲಾವತಿ ಅವರು ಅತ್ಯಂತ ಬಡತನದಲ್ಲಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಅನಿರೀಕ್ಷಿತ ಅನಾಹುತದಿಂದಾಗಿ ಸುಮಾರು 50,000 ಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಮೊತ್ತದ ಹಾನಿಯನ್ನು ಭರಿಸುವ ಶಕ್ತಿ ಈ ಬಡ ಕುಟುಂಬಕ್ಕಿಲ್ಲದಂತಾಗಿದೆ.

Leave a Reply

Your email address will not be published. Required fields are marked *

error: Content is protected !!