ಅತ್ತಿಗೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಮೈದುನ: ದೂರು
ಕಡಬ: ಮೈದುನ ತನ್ನ ಅತ್ತಿಗೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲೆತ್ನಿಸಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಐತ್ತೂರು ಎಂಬಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿರುವುದಾಗಿ ವರದಿಯಾಗಿದೆ.

ಐತ್ತೂರು ನಿವಾಸಿ ಬೇಬಿ ಕೆ.ಎಸ್. ಎಂಬವರು ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಿದ್ದು, ತನ್ನ ಮನೆಯ ಸಮೀಪ ಬೋರ್ವೆಲ್ ನಲ್ಲಿ ನೀರು ಸಿಕ್ಕಿದ್ದರಿಂದ ಅಸೂಯೆಗೊಂಡ ತನ್ನ ಪತಿಯ ಸಹೋದರ ಕುಸುಮಾಧರ (37) ಎಂಬಾತ ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲೆತ್ನಿಸಿದ್ದು, ಈ ವೇಳೆ ತಾನು ಬೊಬ್ಬೆ ಹಾಕಿದಾಗ ಪೆಟ್ರೋಲ್ ಕ್ಯಾನ್ ಮತ್ತು ಬೆಂಕಿ ಪೊಟ್ಟಣವನ್ನು ಎಸೆದು ಪರಾರಿಯಾಗಿರುವುದಾಗಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




