ರಾಷ್ಟ್ರೀಯ

ಕೇರಳ: ಮುಸ್ಲಿಮ್ ಲೀಗ್‌ನ ಮೊದಲ ಶಾಸಕಿ ಫಾತಿಮಾ ತಹ್ಲಿಯಾ



ತಿರುವನಂತಪುರಂ: ಇಂಡಿಯನ್ ಯೂನಿಯನ್ ಮುಸ್ಲಿಮ್
ಲೀಗ್ (ಐಯುಎಂಎಲ್) ಪಕ್ಷದ ಫಾತಿಮಾ ತಹ್ಲಿಯಾ ಅವರು ಪೆರಂಬ್ರಾ ಕ್ಷೇತ್ರದಲ್ಲಿ ಜಯಗಳಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಅವರು ಕೇರಳದ ಆಡಳಿತಾರೂಢ ಎಲ್ ಡಿಎಫ್‌ನ ಸಂಚಾಲಕ ಮತ್ತು ಸಿಪಿಐ (ಎಂ)ನ ಹಿರಿಯ ನಾಯಕ ಟಿ.ಪಿ. ರಾಮಕೃಷ್ಣನ್ ಅವರನ್ನು 5 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.

1980ರಿಂದಲೂ ಸಿಪಿಐ (ಎಂ) ನಿರಂತರ ಜಯ ಗಳಿಸುತ್ತಾ ಬಂದಿದ್ದ ಪೆರಂಬ್ರಾ ಕ್ಷೇತ್ರದಲ್ಲಿ ಜಯ ಗಳಿಸುವ ಮೂಲಕ ಫಾತಿಮಾ ತಹ್ಲಿಯಾ ಹೊಸ ದಾಖಲೆ ಬರೆದಿದು ಐಯುಎಂಎಲ್ ಪಕ್ಷದ ಇತಿಹಾಸದಲ್ಲಿ ಮೊದಲ ಮಹಿಳಾ ಶಾಸಕಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!