ಕರಾವಳಿಕ್ರೈಂ

ಒಳಮೊಗ್ರು: ಅಣ್ಣನಿಂದ ತಂಗಿಯ ಮೇಲೆ ಕತ್ತಿಯಿಂದ ಹಲ್ಲೆ


ಪುತ್ತೂರು: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣನೇ  ತಂಗಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಉರುವ ಎಂಬಲ್ಲಿ ನಡೆದಿದೆ.


ಪುತ್ತೂರು ನಿವಾಸಿ ಮಮ್ತಾಜ್‌ (32) ಎಂಬವರು ಹಲ್ಲೆಗೊಳಗಾದವರು. ಇವರ ತಂದೆ ಹಾಗೂ ಅಣ್ಣ ಕಲಂದರ್‌ ಶಾಫಿ ನಡುವೆ ಜಮೀನಿನ ವಿಚಾರದಲ್ಲಿ ಹಳೆಯ ತಕರಾರಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಮಾ.15ರಂದು ಬೆಳಿಗ್ಗೆ ಮಮ್ತಾಜ್‌ ಅವರು ಉರುವದಲ್ಲಿರುವ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ, ಅಲ್ಲಿಗೆ ಬಂದ ಕಲಂದರ್‌ ಶಾಫಿ ಅವಾಚ್ಯವಾಗಿ ಬೈದು, ಕೊಲೆ ಬೆದರಿಕೆ ಹಾಕಿದ್ದಲ್ಲದೆ ತನ್ನ ಬಳಿಯಿದ್ದ ಕತ್ತಿಯಿಂದ ಮಮ್ತಾಜ್‌ ಅವರ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಮಮ್ತಾಜ್‌ ಅವರ ಕೈಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.



ಈ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)-2023 ರ ಕಲಂ: 352, 351(3), ಮತ್ತು 118(1) ರ ಅಡಿಯಲ್ಲಿ ಮೊಕದ್ದಮೆ (ಅ.ಕ್ರ: 45/2026) ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!