ಅಂತಾರಾಷ್ಟ್ರೀಯ

ನೆರೆಯ ರಾಷ್ಟ್ರಗಳ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷ!

ಟೆಹ್ರಾನ್: ಅಚ್ಚರಿಯ ಬೆಳವಣಿಗೆಯಲ್ಲಿ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ನೆರೆಯ ರಾಷ್ಟ್ರಗಳ ಕ್ಷಮೆಯಾಚಿಸಿದ್ದಾರೆ.


ಇರಾನ್ ಮೇಲಿನ ದಾಳಿ ಮತ್ತು ತಮ್ಮ ಸರ್ವೋಚ್ಛ ನಾಯಕ ಆಯತೊಲ್ಲ ಅಲಿ ಖಮೇನಿ ವಿಚಾರವಾಗಿ ಕೆಂಡಾಮಂಡಲವಾಗಿರುವ ಇರಾನ್ ಅಚ್ಚರಿ ಬೆಳವಣಿಗೆಯಲ್ಲಿ ತನ್ನ ನೆರೆಹೊರೆ ರಾಷ್ಟ್ರಗಳ ಕ್ಷಮೆಕೋರಿದೆ.

ನೆರೆಹೊರೆಯವರಿಗೆ ಕ್ಷಮಿಸಿ ಎಂದು ಮಸೌದ್ ಪೆಜೆಶ್ಕಿಯಾನ್ ಹೇಳಿದ್ದು,ಆ ಮೂಲಕ ಅಮೆರಿಕ-ಇಸ್ರೇಲ್ ಜೊತೆಗಿನ ಯುದ್ಧದ ಮಧ್ಯೆ ಉದ್ವಿಗ್ನತೆಯನ್ನು ಶಮನಗೊಳಿಸಲು ಮೊದಲ ಪ್ರಮುಖ ಹೆಜ್ಜೆ ಇಟ್ಟಿದೆ.

ನಿಮ್ಮ ನೆಲದಿಂದ ನಮ್ಮ ಮೇಲೆ ದಾಳಿಯಾಗದ ಹೊರತು ನಾವು ದಾಳಿ ಮಾಡಲ್ಲ, ಹಾಲಿ ಸಂಘರ್ಷ ಉಲ್ಬಣವನ್ನು ಶಮನಗೊಳಿಸುವ ಮೊದಲ ಪ್ರಮುಖ ಹೆಜ್ಜೆಯನ್ನು ಇರಾನ್ ಇಟ್ಟಿದ್ದು, ಇರಾನ್ ಮೇಲಿನ ದಾಳಿಯು ಅವರ ಪ್ರದೇಶದಿಂದ ಹುಟ್ಟಿಕೊಳ್ಳದ ಹೊರತು ಟೆಹ್ರಾನ್ ನೆರೆಯ ರಾಷ್ಟ್ರಗಳ ವಿರುದ್ಧ ಕ್ಷಿಪಣಿ ದಾಳಿ ಅಥವಾ ವೈಮಾನಿಕ ದಾಳಿಗಳನ್ನು ನಡೆಸುವುದಿಲ್ಲ ಎಂದು ದೇಶದ ಮಧ್ಯಂತರ ನಾಯಕತ್ವ ಮಂಡಳಿಯ ಪ್ರಮುಖರೂ ಆಗಿರುವ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!