ಜನ ಸಾಮಾನ್ಯರ ಪರವಾದ ಬಜೆಟ್-ಅಶೋಕ್ ರೈ
ಪುತ್ತೂರು: ಸಿಎಂ ಸಿದ್ದರಾಮಯ್ಯ ಅವರು ಮಂದಿಸಿದ ಬಜೆಟ್ ಜನ ಸಾಮಾನ್ಯರ ಪರವಾದ ಅತ್ಯುತ್ತಮ ಬಜೆಟ್ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಭಿಪ್ರಾಯ ಪಟ್ಟಿದ್ದಾರೆ.

300 ಹಾಸಿಗೆಗಳ ಪುತ್ತೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಬಜೆಟ್ ನಲ್ಲಿ ಅನುದಾನ ಮಂಜೂರು ಮಾಡಡಲಾಗಿದೆ. ಗ್ಯಾರೆಂಟಿ ಯೋಜನೆಗೆ ಹಣ ಮೀಸಲಿಡಲಾಗಿದೆ. 5 ಕಿಲೋ ಅಕ್ಕಿ ಜತೆಗೆ ಇಂದಿರಾ ಕಿಟ್ ನೀಡಲು ನಿರ್ಧರಿಸಲಾಗಿದೆ. ಪ್ರಥಮ ಬಾರಿಗೆ ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ ಘೋಷಣೆ ಮಾಡಲಾಗಿದೆ. ದ.ಕ. ಜಿಲ್ಲೆಯಲ್ಲಿ 2 ಹೆಚ್ಚುವರಿ ಪೊಲಿಸ್ ಠಾಣೆ ಸ್ಥಾಪಿಸಲಾಗುತ್ತದೆ. ಕೊಲ್ಲೂರು ಮತ್ತು ಸುಬ್ರಹ್ಮಣ್ಯ ದೇವಾಲಯಗಳ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಿ ಘೋಷಣೆ ಮಾಡಲಾಗಿದೆ. ಎಲ್ಲ ಸಮುದಾಯ, ವರ್ಗಗಳ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಬಜೆಟ್ ಮಾಡಿದ್ದಾರೆ. ಯಾರು ಏನೇ ಹೇಳಲಿ, ಇದು ಜನ ಸಾಮಾನ್ಯರ ಬಜೆಟ್ ಎಂದು ಅವರು ತಿಳಿಸಿದ್ದಾರೆ.





