ಇರ್ದೆ ಪಳ್ಳಿತ್ತಡ್ಕ ಉರೂಸ್ ಕಮಿಟಿ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಕೆ.ಎಂ.ಕೆ, ಪ್ರ.ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಟಿ.ಎಂ
ಪುತ್ತೂರು: ಕರಾವಳಿಯ ಸೌಹಾರ್ದತೆಯ ಕೇಂದ್ರವೆಂದೇ ಪ್ರಸಿದ್ದಿ ಪಡೆದಿರುವ ಇತಿಹಾಸ ಪ್ರಸಿದ್ಧ ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್ ಉರೂಸ್ ಸಮಾರಂಭ ಎ.5ರಿಂದ ಎ.11ರ ವರೆಗೆ ಅಸ್ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಆ ಪ್ರಯುಕ್ತ ಕೊರಿಂಗಿಲ ಜಮಾಅತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉರೂಸ್ ಕಮಿಟಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಶಾಹುಲ್ ಹಮೀದ್ ಕೆ.ಎಂ.ಕೆ ಕೊರಿಂಗಿಲ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಟಿ.ಎಂ, ಉಪಾಧ್ಯಕ್ಷರಾಗಿ ಹಮೀದ್ ಕೊಮ್ಮೆಮ್ಮಾರ್, ನವಾಝ್ ಟಿ.ಎಂ, ಜೊತೆ ಕಾರ್ಯದರ್ಶಿಗಳಾಗಿ ನೌಫಲ್ ಬೆಟ್ಟಂಪಾಡಿ, ಶಾಫಿ ಕೇಕನಾಜೆ, ಕೋಶಾಧಿಕಾರಿಯಾಗಿ ಮೂಸಕುಂಞಿ ಶಾಲಾಬಳಿ ಬೆಟ್ಟಂಪಾಡಿ ಆಯ್ಕೆಯಾದರು. ಹಾಗೂ ೫೦ ಸದಸ್ಯರನ್ನೊಳಗೊಂಡ ಕಮಿಟಿಯನ್ನು ರಚಿಸಲಾಯಿತು. ಉರೂಸ್ ಸಮಿತಿಯ ಸಲಹೆಗಾರರಾಗಿ ಜಮಾಅತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ, ಆಲಿಕುಂಞ ಹಾಜಿ ಕೊರಿಂಗಿಲ, ಮಹಮ್ಮದ್ ಹಾಜಿ ಶಾಲಾಬಳಿ, ಶಾಹುಲ್ ಹಮೀದ್ ಮುಸ್ಲಿಯಾರ್, ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಅಬ್ದುಲ್ಲ ಹಾಜಿ ಆನಡ್ಕ, ಅಬ್ದುಲ್ಲ ನೆಕ್ಕರೆ, ಅಬ್ದುಲ್ ಕುಂಞಿ ಹಾಜಿ ಕೊರಿಂಗಿಲ ಮೊದಲಾದವರನ್ನು ಆಯ್ಕೆ ಮಾಡಲಾಯಿತು.





