ಕರಾವಳಿಕ್ರೈಂ

ಪುತ್ತೂರು: ಮಾದಕ ವಸ್ತು ಎಂಡಿಎಂಎ ಮಾರಾಟ, ನಾಲ್ವರು ಆರೋಪಿಗಳ ಬಂಧನ



ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ,  ರೆಂಜ, ಆರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪೊಲೀಸರು ಪತ್ತೆ ಮಾಡಿ, ಆರೋಪಿಗಳನ್ನು ಬಂಧಿಸಿದ್ದಾರೆ.



ಮೊಹಮ್ಮದ್ ಹರ್ಷದ್ (33), ಮಹಮ್ಮದ್ ಆರೀಶ್ (31),
ಇಬ್ರಾಹಿಂ ಅಶ್ರಫ್ ಅಲಿಯಾಸ್ ರೋಜಾ ಅಶ್ರಫ್ (46), ಎಂಬವರನ್ನು ಹಾಗೂ ಆರೋಪಿಗಳಿಗೆ ಮಾದಕ ವಸ್ತು ಎಂಡಿಎಂಎ ನೀಡುತ್ತಿದ್ದ ಬಂಟ್ವಾಳ ನಿವಾಸಿ ಮುಸ್ತಾಫ (46) ಎಂಬವರನ್ನು ಬಂಧಿಸಿದ್ದಾರೆ.


ಆರೋಪಿಗಳಿಂದ ಅಂದಾಜು ರೂ. 50,000/- ಮೌಲ್ಯದ ಸುಮಾರು 6.39 ಗ್ರಾಂ ಎಂಡಿಎಂಎ, ಗಾಂಜಾ 0.87 ಗ್ರಾಂ, ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು ರೂ ಆರು ಲಕ್ಷ  ಮೌಲ್ಯದ 2 ಕಾರು ಹಾಗೂ ಇತರೆ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ 6,50,000/-ರೂ ಗಳಾಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಿನಾಂಕ: 24.01.2026 ರಂದು ಅ.ಕ್ರ  ನಂ: 13-2026, ಕಲಂ : – 8(c)21(b) NDPS Act.25(1B)(B) Arms Act ರಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಗುಣಾಪಾಲ ಜೆ ರವರು ನೇತೃತ್ವದ ತನಿಖಾ ತಂಡದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಉಪ ನಿರೀಕ್ಷಕರಾದ ಸುಶ್ಮಾ ಭಂಡಾರಿ ಹಾಗೂ ಸಿಬ್ಬಂದಿಗಳಾದ ಮುರುಗೇಶ್ ಪರಮೇಶ್ವರ, ಸತೀಶ್, ಸುಬ್ರಹ್ಮಣ್ಯ, ಹರೀಶ್, ನಾಗೇಶ್, ಭವಿತ್ ರೈ ವಿನೋದ್, ನಾಗರಾಜ್, ಕಾರ್ತಿಕ್   ಹಾಗೂ ವಿಶೇಷ ತಂಡದ ಸಿಬ್ಬಂದಿಗಳಾದ ಅದ್ರಾಮ, ಪ್ರಶಾಂತ  ಎಂ, ಪ್ರವೀಣ್ ರೈ, ಪ್ರಶಾಂತ್ ರೈ, ಹರ್ಷಿತ್, ಸಂಪತ್ ರವರು ಹಾಗೂ ಸೋಕೋ ತಂಡದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!