ದರ್ಬೆಯಲ್ಲಿ ‘ಕ್ರಿಸ್ಪಿ ಬೈಟ್ಸ್’ ಶುಭಾರಂಭ
ಪುತ್ತೂರು: ಬೆಂಗಳೂರಿನ ಹೆಸರಾಂತ ಕೆಫೆ ‘ಸ್ಟಾಪ್ ಎನ್ ಜಾಯ್’ ಇದರ ಸಹಸಂಸ್ಥೆ ಕ್ರಿಸ್ಪಿ ಬೈಟ್ಸ್ ಜ.19ರಂದು ದರ್ಬೆ ಲಿಟ್ಲ್ ಫ್ಲವರ್ ಶಾಲಾ ಮುಂಭಾಗದ ಕಾರ್‌ಟೆಕ್ ಬಳಿ ಶುಭಾರಂಭಗೊಂಡಿತು.

ನೂತನ ಕೆಫೆಯನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಪುತ್ತೂರು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಉದ್ಯಮಗಳು ಹೆಚ್ಚಾದಂತೆ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗುತ್ತದೆ, ಮೆಡಿಕಲ್ ಕಾಲೇಜು ಸೇರಿದಂತೆ ಅನೇಕ ಯೋಜನೆಗಳು ಪುತ್ತೂರಿಗೆ ಬರುತ್ತಿದ್ದು ಅವೆಲ್ಲವೂ ಪುತ್ತೂರಿನ ಚಿತ್ರಣವನ್ನೇ ಬದಲಾಯಿಸಲಿದೆ, ಒಟ್ಟಿನಲ್ಲಿ ಪುತ್ತೂರಿನಲ್ಲಿ ಹೊಸ-ಹೊಸ ಉದ್ಯಮಗಳು ಸೃಷ್ಟಿಯಾಗಬೇಕು ಮತ್ತು ಅದರಿಂದ ಉದ್ಯೋಗಗಳೂ ಸೃಷ್ಟಿಯಾದಾಗ ನಾಡು ಅಭಿವೃದ್ಧಿ ಕಾಣುತ್ತದೆ ಎಂದು ಹೇಳಿದರು. ಇಲ್ಲಿ ಶುಭಾರಂಭಗೊಂಡ ಕ್ರಿಸ್ಪಿ ಬೈಟ್ಸ್ ಕೆಫೆ ಜನರ ವಿಶ್ವಾಸ ಗಳಿಸಿದ ಸಂಸ್ಥೆಯಾಗಿ ಹೆಸರು ಪಡೆಯಲಿ ಎಂದು ಹಾರೈಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಾತನಾಡಿ ಪುತ್ತೂರಿನ ಅಭಿವೃದ್ಧಿಗೆ ಕ್ರಿಸ್ಪಿ ಬೈಟ್ಸ್ ಪೂರಕವಾಗಿದ್ದು ಇದರ ಸಹಸಂಸ್ಥೆಗಳು ಮಂಗಳೂರು, ಸುಳ್ಯ ಮತ್ತಿತರ ಕಡೆಗಳಲ್ಲಿ ತೆರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಆರ್.ಐ.ಸಿ ಚೇರ್‌ಮೆನ್ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ಯಾವುದೇ ವ್ಯವಹಾರದಲ್ಲಿ ಪಾರದರ್ಶಕತೆ, ಗುಣಮಟ್ಟ ಮತ್ತು ಪ್ರಾಮಾಣಿಕತೆ ಇದ್ದಾಗ ಅದು ಯಶಸ್ಸಿನ ಪಥದಲ್ಲಿ ಸಾಗುತ್ತದೆ, ಪ್ರವಾದಿ(ಸ.ಅ) ಅವರು ಪ್ರಾಮಾಣಿಕ ವ್ಯವಹಾರದ ಬಗ್ಗೆ ಜಗತ್ತಿನ ಅತ್ಯುನ್ನತ ಸಂದೇಶ ಸಾರಿದ್ದಾರೆ, ಜನರ ಮನಸ್ಸು ಗೆದ್ದರೆ ವ್ಯವಹಾರ ವೃದ್ಧಿಯಾಗುತ್ತದೆ ಎಂದು ಹೇಳಿದರು. ಇಸಾಕ್ ಬಿ.ಜಿ ಮಾಲಕತ್ವದ ಕ್ರಿಸ್ಪಿ ಬೈಟ್ಸ್ ಕೆಫೆ ಮುಂದಿನ ದಿನಗಳಲ್ಲಿ ಅನೇಕ ಸಂಸ್ಥೆಗಳನ್ನು ತೆರೆಯುವಂತಾಗಲಿ ಎಂದು ಆಶಿಸಿದರು.
ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ ಉತ್ತಮ ವ್ಯವಹಾರದ ಮೂಲಕ ಕ್ರಿಸ್ಪಿ ಬೈಟ್ಸ್ ಉದ್ಯಮ ಕ್ಷೇತ್ರದಲ್ಲಿ ಹೆಸರು ಪಡೆಯಲಿ ಎಂದು ಹೇಳಿದರು.
ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಶುಭ ಹಾರೈಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಸಿಝ್ಲರ್ ಗ್ರೂಪ್‌ನ ಪ್ರಸನ್ನ ಕುಮಾರ್ ಶೆಟ್ಟಿ, ಎಸ್.ಡಿ.ಪಿ.ಐ ಮಂಗಳೂರು ಗ್ರಾಮಾಂತರ ಕಾರ್ಯದರ್ಶಿ ಸಿದ್ದೀಕ್ ಕೆ.ಎ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಶೀದ್ ಮುರ, ಹಸೈನಾರ್ ಎಚ್ ರೆಂಜಲಾಡಿ, ಹಮ್ನಫಾ ಕಾಂಪ್ಲೆಕ್ಸ್‌ನ ಮಾಲಕ ಅಬ್ದುಲ್ ಹಮೀದ್ ವಿಟ್ಲ, ರೆಂಜಲಾಡಿ ಮಸೀದಿ ಪ್ರ.ಕಾರ್ಯದರ್ಶಿ ಝೈನುದ್ದೀನ್ ಜೆ.ಎಸ್, ನರಸಭಾ ನಾಮನಿರ್ದೇಶಿತ ಸದಸ್ಯ ಶರೀಫ್ ಬಲ್ನಾಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರಿಸ್ಪಿ ಬೈಟ್ಸ್‌ನ ಮಾಲಕ ಇಸಾಕ್ ಬಿ.ಜಿ ರೆಂಜಲಾಡಿ ಮಾತನಾಡಿ ನಮ್ಮ ಕೆಫೆಯಲ್ಲಿ ಫ್ರೈಡ್ ಚಿಕನ್, ಹುಮ್ಮೂಸ್, ಪಾಸ್ತಾ, ಬರ್ಗರ್, ಸ್ಯಾಂಡ್‌ವಿಚ್, ಮಿಲ್ಕ್ ಶೇಕ್, ಐಸ್‌ಕ್ರೀಮ್ಸ್ ಸೇರಿದಂತೆ ವಿವಿಧ ವೆರೈಟಿ ಐಟಂಗಳು ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.

ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಸ್ವಾಗತಿಸಿದರು. ಕ್ರಿಸ್ಪಿ ಬೈಟ್ಸ್‌ನ ಮಾಲಕ ಇಸಾಕ್ ಬಿ.ಜಿ ಹಾಗೂ ಅವರ ಸಹೋದರ ರಝಾಕ್ ಬಿ.ಜಿ ಶಾಸಕ ಅಶೋಕ್ ರೈ ಅವರನ್ನು ಗೌರವಿಸಿ ಸ್ಮರಣಿಕೆ ನೀಡಿದರು. ರಝಾಕ್ ಬಿ.ಜಿ, ಸಿದ್ದೀಕ್ ಕೂರ್ನಡ್ಕ, ಝೈದ್ ಕೂರ್ನಡ್ಕ, ಇಮ್ರಾನ್ ಮಲ್ನಾಡ್, ಅಝೀಝ್ ರೆಂಜಲಾಡಿ, ನಾಸಿರ್ ಪಾಪೆತ್ತಡ್ಕ, ಹಾರಿಸ್ ಪಾಪೆತ್ತಡ್ಕ, ಶಾಕಿರ್ ಪಾಪೆತ್ತಡ್ಕ ಮತ್ತಿತರರು ಸಹಕರಿಸಿದರು. ಕೆ.ಎಂ ಹನೀಫ್ ರೆಂಜಲಾಡಿ ಹಾಗೂ ಆಶಿಕ್ ಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.



