ಸಾಲ್ಮರ ದಾರುಲ್ ಹಸನಿಯಾದಲ್ಲಿ ಗಲ್ಫ್ ಪ್ರತಿನಿಧಿ ಸಂಗಮ
ಪುತ್ತೂರು: ದಾರುಲ್ ಹಸನಿಯಾ ಅಕಾಡೆಮಿ ಸಾಲ್ಮರ ಇದರ ಗಲ್ಫ್ ಪ್ರತಿನಿಧಿಗಳ ಸಂಗಮ ಸಂಸ್ಥೆಯಲ್ಲಿ ನಡೆಯಿತು. ದಾರುಲ್ ಹಸನಿಯಾ ಜುಬೈಲ್ ಘಟಕದ ಅಧ್ಯಕ್ಷ ಫೈರೋಝ್ ಹಾಜಿ ಪರ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಯಹ್ಯಾ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ಸಿರಾಜುದ್ದೀನ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿ ಸಂಸ್ಥೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಅಬ್ದುಲ್ ಹಮೀದ್ ಬಾಖವಿ ವಿಟ್ಲ, ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ, ದಾರುಲ್ ಹಸನಿಯಾ ದುಬೈ ಘಟಕದ ಅಧ್ಯಕ್ಷ ಶರೀಫ್ ಬೈತಡ್ಕ, ಝಕರಿಯಾ ಬುರೈದ, ಬಾತಿಷಾ ಅಬುದಾಬಿ, ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್, ಇರ್ಶಾದ್ ಫೈಝಿ ಮುಕ್ವೆ, ಬಾತಿಷಾ ಮೊದಲಾದವರು ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಆಸಿಫ್ ಹಾಜಿ ಪರ್ಲಡ್ಕ, ರಫೀಕ್ ಹಾಜಿ ಸುಲ್ತಾನ್ ಕೊಡಾಜೆ, ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ರಿಯಾಝ್ ಇಂಜಿನಿಯರ್, ಅಶ್ರಫ್ ಹಾಜಿ ಪರ್ಲಡ್ಕ, ಅಬ್ದುಲ್ ರಝಾಕ್ ಆರ್.ಪಿ ಪಡೀಲ್, ಹಾಫಿಝ್ ಮಹರೂಫ್, ಹಾಫಿಝ್ ಅಬ್ದುಲ್ ಮನ್ನಾನ್, ಶಾಕಿರ್ ಯಮಾನಿ ಕಲ್ಲಗುಡ್ಡೆ, ರಫೀಕ್ ಪರ್ಲಡ್ಕ ಉಪಸ್ಥಿತರಿದ್ದರು. ಅಬ್ದುಲ್ ಕರೀಂ ದಾರಿಮಿ ಸ್ವಾಗತಿಸಿದರು. ಅನ್ವರ್ ಸ್ವಾದಿಕ್ ಮುಸ್ಲಿಯಾರ್ ವಿವಿಧ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.





