ಕರಾವಳಿಕ್ರೈಂ

ಗೂಡ್ಸ್‌ ಟೆಂಪೊ ಢಿಕ್ಕಿ: ಪಾದಚಾರಿ ಮೃತ್ಯು



ಕಡಬ: ಗೂಡ್ಸ್‌ ಟೆಂಪೊ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಕಡಬ ಠಾಣಾ ವ್ಯಾಪ್ತಿಯ ಆತೂರಿನಲ್ಲಿ ಡಿ.29ರಂದು ನಡೆದಿದೆ.
ಮೃತರನ್ನು ಅಬ್ದುಲ್ ಖಾದರ್ ಸಖಾಫಿ ಎಂದು ಗುರುತಿಸಲಾಗಿದೆ. ಇವರು ಕಾಸರಗೋಡಿನ ಮುಹಿಮ್ಹಾತ್ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

Oplus_131072



ಸಂಬಂಧಿಕರ ಮದರಂಗಿ ಕಾರ್ಯಕ್ರಮಕ್ಕೆ ಮನೆಯವರ ಜೊತೆ ಬಂದಿದ್ದ ಇವರು ಆತೂರಿನಲ್ಲಿ ಬಸ್ಸಿನಿಂದ ಇಳಿದು, ಮನೆಯವರನ್ನು ರಿಕ್ಷಾದಲ್ಲಿ ಕಳುಹಿಸಿದ್ದರು. ಬಳಿಕ ಕಾರ್ಯಕ್ರಮಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಗೂಡ್ಸ್‌ ಟೆಂಪೊ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.


ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಖಾದರ್ ಸಖಾಫಿಯವರನ್ನು ಸ್ಥಳೀಯರು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದರು. ಪರಿಶೀಲಿಸಿದ ವೈದ್ಯರು ಅದಾಗಲೇ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!