ಮರಾಟಿ ಸಮಾಜ ಸೇವಾ ಸಂಘದ ಕಟ್ಟಡಕ್ಕೆ ಕಿಡಿಗೇಡಿಗಳಿಂದ ಹಾನಿ, ಪೊಲೀಸ್ ದೂರು
ಪುತ್ತೂರು: ಸರ್ವೆ ಗ್ರಾಮದ ಎಲಿಯದಲ್ಲಿರುವ ಮರಾಟಿ ಸಮಾಜ ಸೇವಾ ಸಂಘದ ಕಟ್ಟಡಕ್ಕೆ ಕಿಡಿಗೇಡಿಗಳು ಹಾನಿ ಮಾಡಿರುವ ಘಟನೆ ನಡೆದಿದ್ದು ಈ ಕುರಿತು ಸಂಘದಿಂದ ಪೊಲೀಸ್ ದೂರು ನೀಡಲಾಗಿದೆ.
ಮರಾಟಿ ಸಮಾಜ ಸೇವಾ ಸಂಘದ ಹೊರಭಾಗದಲ್ಲಿರುವ ವಿದ್ಯುತ್ ಉಪಕರಣಕ್ಕೆ ಹಾಗೂ ಗೋಡೆಗೆ ಹಾನಿಗೊಳಿಸಲಾಗಿದ್ದು ಡಿ.22ರಂದು ಘಟನೆ ಬೆಳೆಕಿಗೆ ಬಂದಿದೆ.
ಹಾನಿಗೊಳಿಸಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಲಿಯ ಮರಾಟ ಸಮಾಜ ಸೇವಾ ಸಂಘದ ವತಿಯಿಂದ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಸಂದರ್ಭದಲ್ಲಿ ಮಾತೃ ಸಂಘದ ಅಧ್ಯಕ್ಷ ಕರುಣಾಕರ ಆಲೆಟ್ಟಿ ಪಾಂಗ್ಲಾಯಿ, ಎಲಿಯ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಂದರ ನಾಯ್ಕ ಎಲಿಯ, ಕಾರ್ಯದರ್ಶಿ ನವೀನ್ ನಾಯ್ಕ, ಗಿರೀಶ್ ನಾಯ್ಕ ಸೊರಕೆ, ನವೀನ್ ನಾಯ್ಕ ಸೊರಕೆ, ಚೇತನ್ ನಾಯ್ಕ ಎಲಿಯ, ಜಯಂತ ನಾಯ್ಕ ಎಲಿಯ ಉಪಸ್ಥಿತರಿದ್ದರು.



