ಕರಾವಳಿ

ಮಧುರಾ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ವಾರ್ಷಿಕ ಕ್ರೀಡೋತ್ಸವ

ಪುತ್ತೂರು: ಮೇನಾಲ ಮಧುರಾ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ವಾರ್ಷಿಕ ಕ್ರೀಡೋತ್ಸವ ಡಿ.13ರಂದು ನಡೆಯಿತು.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್ಸೈ ಕುಮಾರಿ ಸುಷ್ಮಾ ಜಿ. ಭಂಡಾರಿ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.  ಶಾಂತಿಯ ಪ್ರತೀಕವಾಗಿ ಸ್ಥಾಪಕ ಟ್ರಸ್ಟಿ ಖತೀಜಮ್ಮ ಮಧುರಾ ಅವರು ಪಾರಿವಾಳವನ್ನು ಹಾರಿಸಿದರು.

ಮುಖ್ಯೋಪಾಧ್ಯಾಯಿನಿ ಪುಷ್ಪಲತಾ ರಾವ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಜನರಲ್ ಸೆಕ್ರೆಟರಿ ಮಿಸ್ರಿಯಾ ಮಧುರಾ, ಪಿಟಿಎ ಅಧ್ಯಕ್ಷ ಆಲಿ ಕುಂಞಿ, ಆಡಳಿತಾಧಿಕಾರಿ ಅಬ್ದುಲ್ ರಹ್ಮಾನ್, ಮಧುರಾ ಸ್ಕೂಲ್‌ನ ನಿರ್ದೇಶಕ ಮೇನಾಲ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಉಪಸ್ಥಿತರಿದ್ದರು.



ನಾಲ್ಕನೇ ತರಗತಿ ವಿದ್ಯಾರ್ಥಿಗಳಿಂದ ಸಂಗೀತಾಭ್ಯಾಸ (ಮ್ಯೂಸಿಕ್ ಡ್ರಿಲ್) ಕಾರ್ಯಕ್ರಮ ನಡೆಯಿತು. ಶಾಲೆಯ ಕ್ರೀಡಾ ಸಚಿವ  ಮುನವ್ವಿರ್ ಹಾಗೂ ಇತರ ಗಣ್ಯರು ಕ್ರೀಡಾ ಜ್ಯೋತಿಯನ್ನು ಪ್ರಜ್ವಲಿಸಿದರು. ನಂತರ ಕ್ರೀಡಾ ಪ್ರತಿಜ್ಞೆ ಕೈಗೊಂಡರು.  ಶಫ್ರೀನಾ ಸ್ವಾಗತಿಸಿದರು. ರುಕ್ಸಾನಾ ವಂದಿಸಿದರು. ಜಹೀರಾ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ವೇಳೆಗೆ ಕಾರ್ಯದರ್ಶಿ ಮಿಸ್ರಿಯ ಮಧುರಾ ಅವರು ಶಾಲಾ ಧ್ವಜವನ್ನು ಅನಾವರಣ ಮಾಡುವ ಮೂಲಕ ಕಾರ್ಯಕ್ರಮ ಸಮಾರೋಪಗೊಂಡಿತು.
ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!