ದರ್ಬೆಯಲ್ಲಿ ‘ಟೋಯ್ ಗ್ಯಾಲರಿ’ ಶುಭಾರಂಭ
ಪುತ್ತೂರು: ಟೋಯ್ಸ್, ಸೈಕಲ್, ಬ್ಯಾಟರಿ ಚಾಲಿತ ಜೀಪು, ಸ್ಕೂಟರ್, ವಾಚ್, ಗಿಫ್ಟ್ಐಟಂ, ಬ್ಯಾಗ್ ಸೇರಿದಂತೆ ಮಕ್ಕಳ ಸಂಪೂರ್ಣ ಆಟಿಕೆಗಳ ಮಳಿಗೆ ‘ಟೋಯ್ ಗ್ಯಾಲರಿ’ ಡಿ.18ರಂದು ದರ್ಬೆ ಲಿಟ್ಲ್ ಫ್ಲವರ್ ಶಾಲಾ ಮುಂಭಾಗದಲ್ಲಿ ಶುಭಾರಂಭಗೊಂಡಿತು. ಟೋಯ್ಸ್ ಗ್ಯಾಲರಿ ಮಳಿಗೆಯಲ್ಲಿ ಮಕ್ಕಳ ಎಲ್ಲಾ ಬಗೆಯ ಆಟಿಕೆಗಳು ಲಭ್ಯವಿದ್ದು ಶುಭಾರಂಭದ ಹಿನ್ನೆಲೆಯಲ್ಲಿ ಡಿ.17ರಿಂದ ಡಿ.21ರ ವರೆಗೆ ನಾಲ್ಕು ದಿನಗಳ ಭರ್ಜರಿ ಆಫರ್ ಪ್ರಕಟಿಸಲಾಗಿದೆ.

ನೂತನ ಮಳಿಗೆಯನ್ನು ಉದ್ಘಾಟಿಸಿದ ಸರ್ವೆ ಎಸ್.ಜಿ.ಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯಗುರು ಶ್ರೀನಿವಾಸ್ ಎಚ್.ಬಿ ಮಾತನಾಡಿ ನನ್ನ ಶಿಷ್ಯ ಅಶ್ರಫ್ ಅವರು ಟೋಯ್ ಗ್ಯಾಲರಿ ಎನ್ನುವಂತಹ ಮಕ್ಕಳ ಆಟಿಕೆಗಳ ಮಳಿಗೆಯನ್ನು ತೆರೆದಿರುವುದು ಬಹಳ ಸಂತೋಷ ತಂದಿದೆ, ವ್ಯವಹಾರದಲ್ಲಿ ಪ್ರಾಮಾಣಿಕತೆ ಮತ್ತು ಗುಣಮಟ್ಟವನ್ನು ಅಳವಡಿಸಿಕೊಂಡು ಗ್ರಾಹಕರ ವಿಶ್ವಾಸ ಗಳಿಸಿದಾಗ ಯಾವುದೇ ಉದ್ಯಮ ಯಶಸ್ಸು ಸಾಧಿಸುತ್ತದೆ ಎಂದು ಅವರು ಹೇಳಿದರು. ಸ್ಪರ್ಧಾತ್ಮಕತೆಯ ಯುಗದಲ್ಲಿ ಆನ್ಲೈನ್ ಬ್ಯುಸಿನೆಸ್ ಹೆಚ್ಚಾಗಿರುವುದರಿಂದ ಇತರ ವ್ಯಾಪಾರಸ್ಥರಿಗೆ ಹೊಡೆತ ಬಿದ್ದಿದೆ, ಆದರೆ ಅದನ್ನು ತಲೆಕೆಡಿಸಿಕೊಳ್ಳದೇ ಆನ್ಲೈನ್ಗಿಂತಲೂ ಅತ್ಯುತ್ತಮ ರೀತಿಯಲ್ಲಿ ನಮ್ಮ ವ್ಯವಹಾರವನ್ನು ಮಾಡುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸಬೇಕು ಎಂದು ಹೇಳಿ ಶುಭ ಹಾರೈಸಿದರು.

ಚಾರ್ಟರ್ಡ್ ಅಕೌಂಟೆಂಟ್ ಸಿದ್ದೀಕ್ ಕೆ.ಎ ಮಾತನಾಡಿ ನಾವು ಮಾಡುವ ವ್ಯಾಪಾರದಲ್ಲಿ ಮೋಸ, ವಂಚನೆ ಇಲ್ಲದೇ ಪ್ರಾಮಾಣಿಕತೆ ಇದ್ದಾಗ ಅಂತಹ ಉದ್ಯಮ ಭವಿಷ್ಯದಲ್ಲಿ ಯಶಸ್ಸು ಕಾಣುತ್ತದೆ ಎಂದು ಹೇಳಿದರು.
ನಮ್ಮ ಕಠಿಣ ಪರಿಶ್ರಮವೇ ಯಶಸ್ಸಿನ ಮೂಲವಾಗಿದ್ದು ಆನ್ಲೈನ್ ವ್ಯವಹಾರಗಳ ಪೈಪೋಟಿಯ ಮಧ್ಯೆಯೂ ತಮ್ಮ ಪ್ರಾಮಾಣಿಕ ವ್ಯವಹಾರದ ಮೂಲಕ ಸಂಸ್ಥೆ ಯಶಸ್ಸಿನ ಹಾದಿಯಲ್ಲಿ ಸಾಗಲಿ, ಇದಕ್ಕೆ ನಮ್ಮೆಲ್ಲರ ಸಹಕಾರ ಯಾವತ್ತೂ ಇದೆ ಎಂದು ಹೇಳಿದರು. ಉದ್ಯಮಿ ಕೃಷ್ಣಮೂರ್ತಿ ಮಾತನಾಡಿ ಟೋಯ್ ಗ್ಯಾಲರಿ ಮಳಿಗೆಯು ಉತ್ತಮ ವ್ಯವಹಾರದ ಮೂಲಕ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.
ಮಳಿಗೆಯನ್ನು ಉದ್ಘಾಟಿಸಿದ ನಿವೃತ್ತ ಮುಖ್ಯಗುರು ಶ್ರೀನಿವಾಸ್ ಎಚ್.ಬಿ ಅವರು ಟೋಯ್ ಗ್ಯಾಲರಿಯ ಮಾಲಕ, ತನ್ನ ಶಿಷ್ಯನಾದ ಅಶ್ರಫ್ ವಿ.ಪಿ ವೀರಮಂಗಲ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ, ಸ್ವೀಟ್ ಬಾಕ್ಸ್ ನೀಡಿ ಅಭಿನಂದಿಸಿದರು. ವೀರಮಂಗಲ ಖತೀಬ್ ನಿಯಾಝ್ ದಾರಿಮಿ ಹಾಗೂ ಯಾಕೂಬ್ ದಾರಿಮಿ ಸೋಂಪಾಡಿ ದುವಾ ನೆರವೇರಿಸಿದರು. ರಿಯಲ್ ಎಸ್ಟೇಟ್ ಉದ್ಯಮಿ ಅಮೀರ್ ದರ್ಬೆ, ವೈಟ್ ಶೂ ಇದರ ಸಗೀರ್, ಆಶಿಕ್ ವೀರಮಂಗಲ, ಗಫ್ಫಾರ್ ವೀರಮಂಗಲ, ಅಬ್ಬಾಸ್ ಪರಂದೋಡಿ, ಫಾಝಿಲ್, ಸಿದ್ದೀಕ್ ವೀರಮಂಗಲ, ಜುನೈದ್ ವೀರಮಂಗಲ ಮತ್ತಿತರರು ಉಪಸ್ಥಿತರಿದ್ದರು. ಟೋಯ್ ಗ್ಯಾಲರಿಯ ಮಾಲಕ ಅಶ್ರಫ್ ವಿ.ಪಿ ವೀರಮಂಗಲ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಟೋಯ್ ಗ್ಯಾಲರಿಯ ಸಿಬ್ಬಂದಿಗಳಾದ ಮಹಮ್ಮದ್ ದಿಶಾನ್ ಸಂಪ್ಯ ಹಾಗೂ ಮುಹಮ್ಮದ್ ಸಾಲ್ಮರ ಸಹಕರಿಸಿದರು.



