ಪೆರ್ನೆ: ಹಸು ಕಳೆದುಕೊಂಡ ಮಹಿಳೆಗೆ
ಆರ್ಥಿಕ ನೆರವು ನೀಡಿದ ಶಾಸಕ ಅಶೋಕ್ ರೈ
ಪುತ್ತೂರು: ಕಳೆದ ಕೆಲವು ವಾರಗಳ ಹಿಂದೆ ಪರ್ನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನವನ್ನು ಕದ್ದು , ಬಳಿಕ ಹತ್ಯೆಗೈದ ಘಟನೆ ನಡೆದಿದ್ದು, ಈ ಪ್ರಕರಣದಲ್ಲಿ ದನ ಕಳೆದುಕೊಂಡ ಮನೆಮಾಲಕಿ ಸುಮತಿಯವರಿಗೆ ಶಾಸಕ ಅಶೋಕ್ ರೈ ಅವರು ದನ ಖರೀದಿಸಲು ಹತ್ತು ಸಾವಿರ ರೂ ನೆರವು ನೀಡಿದ್ದಾರೆ.

ಪೆರ್ನೆ ಗ್ರಾಮದ ಕೊಡಂಬು ಎಂಬಲ್ಲಿ ಈ ಘಟನೆ ನಡೆದಿತ್ತು. ದನವನ್ನು ಕದ್ದು ಮನೆ ಪಕ್ಕದ ತೋಟದಲ್ಲೇ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಈ ಪ್ರಕರಣ ರಾಜಕೀಯ ತಿರುವನ್ನು ಪಡೆದುಕೊಂಡಿತ್ತು. ಘಟನೆ ನಡೆದ ಸುಮತಿಯವರ ಮನೆಗೆ ಶಾಸಕರು ಭೇಟಿ ನೀಡಿ ಸಾಂತ್ವನ ಹೇಳಿದ್ದರು. ದನ ಖರೀದಿಸಲು ಆರ್ಥಿಕ ನೆರವು ನೀಡುವುದಾಗಿಯೂ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಮಹಿಳೆಗೆ ಆರ್ಥಿಕ ನೆರವು ನೀಡಿದ್ದಾರೆ. ಪುತ್ತೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಉಪಸ್ಥಿತರಿದ್ದರು





