ಕರಾವಳಿರಾಜ್ಯ

10 ಕಂಬಳಕ್ಕೆ ಸರಕಾರದಿಂದ ತಲಾ 5 ಲಕ್ಷ ಬಿಡುಗಡೆ: ಶಾಸಕ ಅಶೋಕ್ ರೈ



ಪುತ್ತೂರು: ತುಳುನಾಡಿನ ಐತಿಹಾಸಿಕ ಜನಪದ ಕಲೆಯಾಗಿರುವ ಕಂಬಳವನ್ನು ಉಳಿಸುವನಿಟ್ಟಿನಲ್ಲಿ ಒಂದೆಡೆ ನಿರಂತರ ಹೋರಾಟಗಳು ನಡೆದುಕೊಂಡು ಬರುತ್ತಿದೆ. ಕಂಬಳ ಇನ್ನೇನು ನಿಂತೇ ಬಿಡುತ್ತದೆ ಎನ್ನುವ ಹಂತಕ್ಕೆ ಬಂದಾಗ ಅದನ್ನು ಸುಪ್ರಿಂ ಕೋರ್ಟುತನಕ ಕೊಂಡು ಹೋಗಿ ಉಳಿಸಿದ ಕೀರ್ತಿ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಸಲ್ಲುತ್ತದೆ. ಕಂಬಳವನ್ನು ರಾಜಧಾನಿ ಬೆಂಗಳೂರಿನಲ್ಲಿ ಆಯೋಜನೆ ಮಾಡುವ ಜಗತ್ತಿಗೆ ತುಳುನಾಡಿನ ಕ್ರೀಡೆಯನ್ನು ಪರಿಚಯಿಸಿದ ಹೆಗ್ಗಳಿಗೆ ಆಶೋಕ್ ರೈ ಅವರದ್ದು. ಕಂಬಳ ನಡೆಸುವುದು ಸುಲಭವಲ್ಲ ಅದು ಕಷ್ಟಸಾದ್ಯವಾದ ಕೆಲಸ ಎಂದು ಆಳುವವರ ಗಮನಕ್ಕೆ ತಂದು ಕಂಬಳ ಅದೊಂದು ಕ್ರೀಡೆ ಅದಕ್ಕೂ ಸರಕಾರದ ನೆರವು ದೊರೆಯಬೇಕು ಎಂದು ನಾಡಿನ ದೊರೆಯಲ್ಲಿ ಮನವಿ ಮಾಡಿದ್ದೂ ಅಶೋಕ್ ರೈ. ಇದೀಗ ಕಂಬಳಕ್ಕೆ ಸರಕಾರ ಪ್ರೋತ್ಸಾಹ ನೀಡಬೇಕು ಎಂಬ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದು ಕರಾವಳಿ ಜಿಲ್ಲೆಯಲ್ಲಿ ನಡೆಯುವ ಹತ್ತು ಕಂಬಳಕ್ಕೆ ತಲಾ 5 ಲಕ್ಷದಂತೆ ಅನುದಾನವನ್ನು ಸರಕಾರ ಬಿಡುಗಡೆ ಮಾಡಿದೆ ಇದಕ್ಕೆ ಕಾರಣ ಕರ್ತರು ಶಾಸಕ ಅಶೋಕ್ ರೈ ಅವರೇ ಆಗಿದ್ದಾರೆ.


ಕರ್ನಾಟಕ ಪ್ರವಾಸೋಧ್ಯಮ ಇಲಾಖೆಯ ಮೂಲಕ 2025/26ನೇ ಸಾಲಿನ ಕಂಬಳದ ಅನುದಾನ ಸರಕಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪುತ್ತೂರು ಕಂಬಳ, ಉಪ್ಪಿನಂಗಡಿ ಜಪ್ಪು, ಬಂಟ್ವಾಳ, ವೇಣೂರು,ಮೂಲ್ಕಿ, ಮಂಗಳೂರು, ನರಿಂಗಾಣ, ಮೂಡಬಿದ್ರಿ ಹಾಗೂ ಐಕಳ ಕಂಬಳ ಇದ್ದು ಈ ಕಂಬಳಕ್ಕೆ ತಲಾ 5 ಲಕ್ಷ ಅನುದಾನ ದೊರೆಯಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!