ಕ್ರೀಡೆರಾಷ್ಟ್ರೀಯ

ಪ್ರಧಾನಿಯಲ್ಲಿ ವಿಭಿನ್ನ ಪ್ರಶ್ನೆ ಕೇಳಿದ ಟೀಂ ಇಂಡಿಯಾ ಆಟಗಾರ್ತಿ

ದೆಹಲಿ: ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ಆಟಗಾರ್ತಿಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಬುಧವಾರ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಕೆಲಹೊತ್ತು ಮಾತುಕತೆ, ಕುಶಲೋಪರಿ ನಡೆಸಿದ್ದಾರೆ.

ಸಂವಾದದ ವೇಳೆ ಟೀಮ್ ಇಂಡಿಯಾ ಆಟಗಾರ್ತಿ ಹರ್ಲೀನ್ ಡಿಯೋಲ್ ಅವರು ವಿಭಿನ್ನ ಪ್ರಶ್ನೆಯೊಂದನ್ನು ಪ್ರಧಾನಿಯವರಲ್ಲಿ ಕೇಳಿದ್ದಾರೆ. “ಸರ್, ನಿಮ್ಮ ಚರ್ಮ ಯಾವಾಗಲೂ ಹೊಳೆಯುತ್ತಿರುತ್ತದೆ. ದಯವಿಟ್ಟು ನಿಮ್ಮ ಚರ್ಮದ ಆರೈಕೆ ಹೇಗೆಂದು ತಿಳಿಸುವಿರಾ?” ಎಂದು ಹರ್ಲೀನ್ ಡಿಯೋಲ್ ನಗುತ್ತಾ ಕೇಳಿದರು.


ಹರ್ಲೀನ್ ಡಿಯೋಲ್ ಅವರ ಅನಿರೀಕ್ಷಿತ ಪ್ರಶ್ನೆ ಪ್ರಧಾನಿ ಸೇರಿದಂತೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. ಅಲ್ಲದೆ ಈ ಪ್ರಶ್ನೆಗೆ “ನಾನು ಅದೆಲ್ಲದರ ಬಗ್ಗೆ ಯೋಚಿಸುವುದಿಲ್ಲ” ಎಂದು ಪ್ರಧಾನಿ ಮೋದಿ ಉತ್ತರಿಸಿದರು. ಟೀಮ್ ಇಂಡಿಯಾ ಆಟಗಾರ್ತಿ ಸ್ನೇಹ್ ರಾಣಾ ಮಾತನಾಡಿ ನೀವು ಹೀಗೆ ಹೊಳೆಯಲು ಕೋಟ್ಯಂತರ ಭಾರತೀಯರ ಪ್ರೀತಿ ಕಾರಣ ಎಂದರು. ಸ್ನೇಹ್ ರಾಣಾ ಅವರ ಈ ಉತ್ತರಕ್ಕೆ ಮುಗುಳ್ನಗುತ್ತಾ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಅದು ಸಹ ಇರುತ್ತದೆ, ಇದು ಅತ್ಯಂತ ದೊಡ್ಡ ತಾಕತ್ತು. ನಾನು ಸರಕಾರದಲ್ಲಿ ಸಮಾಜದೊಂದಿಗೆ ಬೆರೆತು 25 ವರ್ಷಗಳಾಗಿವೆ. ಅದರ ಪ್ರಭಾವ ಕೂಡ ಇರುತ್ತದೆ. ಜನರ ಇಂತಹ ಆಶೀರ್ವಾದವೇ ನನ್ನನ್ನು ಸದಾ ಮಿಂಚುವಂತೆ  ಮಾಡಿದೆ ಎಂದರು.

Leave a Reply

Your email address will not be published. Required fields are marked *

error: Content is protected !!