ಕಾಸರಗೋಡು: ಕುಂಬ್ಳೆ ಪ್ಲೈವುಡ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ- ಓರ್ವ ಸಾವು, ಹಲವರಿಗೆ ಗಾಯ
ಕಾಸರಗೋಡು: ಅನಂತಪುರದ ಪ್ಲೈವುಡ್ ಕಾರ್ಖಾನೆಯಲ್ಲಿ ಸುಮಾರು 300 ಕಾರ್ಮಿಕರು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಒಬ್ಬರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅ.27ರಂದು ಸುಮಾರು ಗಂಟೆ 7ರಿಂದ 7.30ರೊಳಗೆ ನಡೆದ ದುರ್ಘಟನೆ ನಡೆದಿದೆ. ಇದರಲ್ಲಿ ಒಬ್ಬ ವಲಸೆ ಕಾರ್ಮಿಕ ಮೃತಪಟ್ಟಿದ್ದಾರೆ. ಅನಂತಪುರ ಬಳಿಯ ಕಣ್ಣೂರು ಕುನ್ನಿಲ್ ಸಮೀಪದ ಡೆಕ್ಕೂರು ಪ್ಲೈವುಡ್ ಫ್ಯಾಕ್ಟರಿಯಲ್ಲಿನ ಬಾಯ್ಲರ್ ಸ್ಪೋಟಗೊಂಡಿದ್ದು ವಿವಿದೆಡೆ ಬೆಂಕಿ ಹರಡಿತು. 300 ರಷ್ಟು ಕಾರ್ಮಿಕರು ಸ್ಪೋಟ ಸಮಯದಲ್ಲಿ ಸ್ಥಳದಲ್ಲಿದ್ದರು ಎಂದು ವರದಿಯಾಗಿದೆ.
ಸ್ಫೋಟದ ಪರಿಣಾಮ ಪೆರಾಲ್ ಕಣ್ಣೂರು, ಸಿದ್ದಿಬಯಲು ಸಮೀಪದವರೆಗೆ ಇದರ ಅಪಾಯ ಸಂಭವಿಸಿದೆ. ಈ ಬಗ್ಗೆ ಅಗ್ನಿಶಾಮಕ ದಳ ಸಮೇತ ಹಲವರು ಪರಿಸ್ಥಿತಿ ನಿಯಂತ್ರಣದಲ್ಲಿ ತೊಡಗಿದ್ದಾರೆ. ಈ ಭಾಗಕ್ಕೆ ವಾಹನ ಸಂಚಾರ ನಿಷೇಧಿಸಲಾಗಿದೆ.




