ಅಶೋಕ ಜನಮನ- 2025
ಶಾಸಕರ ನೇತೃತ್ವದಲ್ಲಿ ಸಮಿತಿ ಸಭೆ
ಪುತ್ತೂರು: ಅ.20ರಂದು ಪುತ್ತೂರಿನಲ್ಲಿ ಶಾಸಕ ಅಶೋಕ್ ರೈ ನೇತೃತ್ವದ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಪ್ರಯುಕ್ತ ನಡೆಯುವ ಅಶೋಕ ಜನಮನ 2025 ರ ವಿವಿಧ ಸಮಿತಿಗಳ ಸಭೆಯು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಶಾಸಕರ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಕಾರ್ಯಕ್ರಮದ ರೂಪುರೇಶೆಗಳ ಬಗ್ಗೆ ಚರ್ಚೆ ನಡೆಯಿತು. ಟ್ರಸ್ಟ್ ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಪ್ರಮುಖರಾದ ನಿಹಾಲ್ ಪಿ ಶೆಟ್ಟಿ, ಮಹಮ್ಮದ್ ಬಡಗನ್ನೂರು, ಮುರಳೀದರ್ ರೈ ಮಟಂತಬೆಟ್ಟು, ಕುಂಬ್ರ ದುರ್ಗಾಪ್ರಸಾದ್ ರೈ, ಕೃಷ್ಣಪ್ರಸಾದ್ ಆಳ್ವ, ಯು ಟಿ ತೌಸೀಫ್, ರೋಶನ್ ರೈ ಬನ್ನೂರು, ದಯಾನಂದ ರೈ, ರಂಜಿತ್ ಬಂಗೇರ, ಪೂರ್ಣೇಶ್ ಭಂಡಾರಿ, ಪೂರ್ಣಿಮಾ, ಸಾಹಿರಾ ಬಾನು, ರಹಿಮಾನ್ ಸಂಟ್ಯಾರ್, ಗಿರೀಶ್ ರೈ ಸಂಟ್ಯಾರ್, ಶೀಲ ಕೋಡಿಂಬಾಡಿ, ಸನತ್ ರೈ ವಲತ್ತಡ್ಕ, ನವೀನ್ ರೈ ಬನ್ನೂರು, ಸುಮಿತ್ ಶೆಟ್ಟಿ, ಹಕೀಂ ಬೊಳುವಾರು, ಜಗನ್ನಾಥ ರೈ ವಳತ್ತಡ್ಕ, ಸ್ವಾತಿ ಜಗನ್ನಾಥ ರೈ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.