ಪೇಸ್ಬುಕ್ ಪೇಜ್‌ನಲ್ಲಿ ರಾಜಕೀಯ ಪಕ್ಷವೊಂದರ ನಾಯಕರಿಗೆ ಅವ್ಯಾಚವಾಗಿ ನಿಂದಿಸಿರುವ ವಿಡಿಯೋ ಪ್ರಸಾರ ಆರೋಪ: ಪ್ರಕರಣ ದಾಖಲು
ಪುತ್ತೂರು: ಪುತ್ತೂರು ಕಸಬಾ ಗ್ರಾಮ ನಿವಾಸಿ ಶಿವಕುಮಾರ್ ಪಿ.ಬಿ ರವರು ಸೆ.15ರಂದು ತನ್ನ ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನ್ನು ವೀಕ್ಷಿಸುತ್ತಿದ್ದಾಗ, ನವೀನ್ ರೈ ಕೈಕಾರ ಎಂಬವರು ಪೇಸ್ಬುಕ್ ಪೇಜ್‌ನಲ್ಲಿ ರಾಜಕೀಯ ಪಕ್ಷವೊಂದರ ನಾಯಕರಿಗೆ ಅವ್ಯಾಚವಾಗಿ ನಿಂದಿಸಿರುವ ವಿಡಿಯೋವನ್ನು ಪ್ರಸಾರ ಮಾಡಿರುವುದು ಕಂಡು ಬಂದಿರುತ್ತದೆ.

ಈ ಬಗ್ಗೆ ಶಿವಕುಮಾರ್ ಪಿಬಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬರ್ : 81/2025, ಕಲಂ: 296 BNS 2023 ರಂತೆ ಪ್ರಕರಣ ದಾಖಲಾಗಿದೆ.





