ಕರಾವಳಿ

ಶತಮಾನೋತ್ಸವದ ಸಂಭ್ರಮದಲ್ಲಿರುವ ಅರಿಯಡ್ಕ ಶಾಲೆಯಲ್ಲಿ  ಆಕರ್ಷಣ್ ಇಂಡಸ್ಟ್ರೀಸ್ ವತಿಯಿಂದ ಕೈ ತೊಳೆಯುವ ಘಟಕ ಉದ್ಘಾಟನೆ

ಪುತ್ತೂರು: ಶತಮಾನೋತ್ಸವದ ಸಂಭ್ರಮದಲ್ಲಿರುವ  ಅರಿಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ   ಮುಕ್ರಂಪಾಡಿಯ ಆಕರ್ಷಕಣ್ ಇಂಡಸ್ಟ್ರೀಸ್ ಸಂಸ್ಥೆಯವರು  ಕೊಡುಗೆಯಾಗಿ ನೀಡಿದ ಕೈ ತೊಳೆಯುವ ಘಟಕ ಆ.25ರಂದು ಉದ್ಘಾಟನೆಗೊಂಡಿತು.

ಆಕರ್ಷಣ್ ಇಂಡಸ್ಟ್ರೀಸ್ ನ ಮ್ಯಾನೇಜರ್ ಹಾಗೂ ಅರಿಯಡ್ಕ ಶಾಲೆಯ ಹಿರಿಯ ವಿದ್ಯಾರ್ಥಿ ಎಸ್.ಪಿ ಬಶೀರ್ ಶೇಖಮಲೆ  ಅವರು ಘಟಕವನ್ನು ಉದ್ಘಾಟಿಸಿದರು. ಆಕರ್ಷಣ್ ಸಂಸ್ಥೆ 30ನೇ ವರ್ಷದ ಸಂಭ್ರಮದಲ್ಲಿದ್ದು ಆ ಸವಿ ನೆನಪಿಗಾಗಿ ಶತಮಾನೋತ್ಸವದ ಸಂಭ್ರಮದಲ್ಲಿರುವ ಅರಿಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಯ ದೃಷ್ಟಿಯಿಂದ ಕೈ ತೊಳೆಯುವ ಘಟಕವನ್ನು ಕೊಡುಗೆಯಾಗಿ ನೀಡಿದ್ದೇವೆ ಎಂದು ತಿಳಿಸಿದರು.

ಶಾಲಾ ಮಕ್ಕಳಿಗೆ ಅವಶ್ಯಕವಾದ ಕೈ ತೊಳೆಯುವ ಘಟಕವನ್ನು ಕೊಡುಗೆಯಾಗಿ ನೀಡಿದ ಆಕರ್ಷಣ್ ಸಂಸ್ಥೆಗೆ ಹಾಗೂ ಇದಕ್ಕಾಗಿ ಮುತುರ್ಜಿವಹಿಸಿದವರಿಗೆ ಶಾಲಾ ವತಿಯಿಂದ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!