ಬನ್ನೂರು ರೈತರ ಸೇವಾ ಸಹಕಾರಿ ಸಂಘಕ್ಕೆ ರೂ.1.64 ಕೋಟಿ ನಿವ್ವಳ ಲಾಭ: ಪಂಜಿಗುಡ್ಡೆ ಈಶ್ವರ ಭಟ್

ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘ 2024-25ನೇ ಸಾಲಿನಲ್ಲಿ 381 ಕೋಟಿ ರೂಪಾಯಿ ವ್ಯವಹಾರ ನಡೆಸಿ 1.64 ಕೋಟಿ ರೂಪಾಯಿ ಲಾಭಗಳಿಸಿದೆ. ಸಂಘದ ವಾರ್ಷಿಕ ಮಹಾಸಭೆಯು ಆ. 4ರಂದು ಬೆಳಿಗ್ಗೆ ಗಂಟೆ 10:30 ಕ್ಕೆ ಬೊಳುವಾರುನಲ್ಲಿರುವ ವಿಶ್ವಕರ್ಮ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತಿಳಿಸಿದ್ದಾರೆ
ವರದಿ ವರ್ಷದಲ್ಲಿ 6659 ಎ ತರಗತಿ ಸದಸ್ಯರಿದ್ದು 5.55 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. ಈ ಪಾಲು ಬಂಡವಾಳವನ್ನು 6ಕೋಟಿ ರೂಪಾಯಿಗೆ ತಲುಪುವಂತೆ ಪ್ರಯತ್ನಿಸಲಾಗುವುದು ಸಂಘದಲ್ಲಿ 26.10 ಕೋಟಿ ಠೇವಣಾತಿ ಇದ್ದು ಮುಂದಕ್ಕೆ 27.00 ಕೋಟಿ ಠೇವಣಿ ಸಂಗ್ರಹ ಮಾಡಲು ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ. ಸದಸ್ಯರ ಸಾಲವು 52.29 ಕೋಟಿ ಇದ್ದು ಮುಂದಕ್ಕೆ 55.00 ಕೋಟಿ ಸಾಲದ ಗುರಿಯನ್ನು ಹಮ್ಮಿಕೊಂಡಿರುತ್ತೇವೆ. ವರದಿ ವರ್ಷದಲ್ಲಿ ಸಂಘವು 164. 40 ಲಕ್ಷ ನಿವ್ವಳ ಲಾಭ ಹೊಂದಿದ್ದು 2025- 26ನೇ ಸಾಲಿನಲ್ಲಿ ರೂ 175.00ಲಕ್ಷ ಲಾಭಗಳಿಸಲು ಕಾರ್ಯಕ್ರಮ ಹಮ್ಮಿಕೊಂಡಿರುತ್ತೇವೆ ಎಂದು ಅವರು ತಿಳಿಸಿದರು. ಆಗಸ್ಟ್ 4ರಂದು ನಡೆಯುವ ಮಹಾಸಭೆಯಲ್ಲಿ ಎಲ್ಲಾ ಸದಸ್ಯರು ಆಗಮಿಸಿ ಸಂಘದ ಅಭಿವೃದ್ಧಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ನಿರ್ದೇಶಕರು ವಿನಂತಿಸಿದ್ದಾರೆ.