ಕರಾವಳಿರಾಜಕೀಯ

ಉಪ್ಪಿನಂಗಡಿ: SDPI ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ



ಉಪ್ಪಿನಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಪ್ಪಿನಂಗಡಿ ಬ್ಲಾಕ್ ಸಮಿತಿ ವತಿಯಿಂದ  ಪಕ್ಷ ಸೇರ್ಪಡೆ ಕಾರ್ಯಕ್ರಮವು ಪಕ್ಷದ ಕಚೇರಿಯಲ್ಲಿ ನಡೆಯಿತು.
ಪ್ರಸಕ್ತ ರಾಜಕೀಯ ಸನ್ನೀವೇಶ ಮತ್ತು ಪಕ್ಷದ ತತ್ವ ಸಿದ್ದಾಂತದ ಕುರಿತು SDPI ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಸಲೀಂ ಗುರುವಾಯನಕೆರೆ ವಿವರಿಸಿದರು

.

ಈ ಸಂದರ್ಭದಲ್ಲಿ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿಕೊಂಡು ಸುಮಾರು 13 ಮಂದಿ ಯುವಕರು ಪಕ್ಷಕ್ಕೆ  ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಸಿರಾಜ್ ಕೂರ್ನಡ್ಕ, SDPI ಉಪ್ಪಿನಂಗಡಿ ಬ್ಲಾಕ್ ಸಮಿತಿ ಅಧ್ಯಕ್ಷರಾದ ಮುಸ್ತಫಾ ಮುಸ್ಲಿಯಾರ್, ಜೊತೆ ಕಾರ್ಯದರ್ಶಿ ಅನ್ವರ್ ಆದರ್ಶನಗರ, ಸದಸ್ಯರಾದ ಝಕರಿಯಾ ಕೊಡಿಪ್ಪಾಡಿ, ಸುಭಾಶ್ ನಗರ ಬ್ರಾಂಚ್ ಸಮಿತಿ ಅಧ್ಯಕ್ಷರಾದ ಸಲೀಂ ಕೊಡಿಪ್ಪಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!