ಪುತ್ತೂರು ಪುಡಾ ಸದಸ್ಯರಿಂದ
ನಗರ ಪ್ರಾಧಿಕಾರ ಕಮಿಷನರ್ ಜೊತೆ ಸಭೆ
ಪುತ್ತೂರು: ಪುತ್ತೂರು ಪುಡಾ ಅಧ್ಯಕ್ಷರು ಮತ್ತು ಸದಸ್ಯರು ಮಂಗಳೂರು ನಗರಪ್ರಾಧಿಕಾರದ ಕಮಿಷನರ್ ಜೊತೆ ಸಭೆ ನಡೆಸಿ ಪುಡಾ ಸಮಸ್ಯೆಗಳ ಬಗ್ಗೆ ಅಧಿಕಾರಿಯ ಗಮನಕ್ಕೆ ತಂದಿದ್ದಾರೆ.

ಮಂಗಳೂರಿನ ಕಚೇರಿಯಲ್ಲಿ ಪುತ್ತೂರು ಪುಡಾ ಅಧ್ಯಕ್ಷರಾದ ಅಮಳ ರಾಮಚಂದ್ರ ನೇತೃತ್ವದ ನಿಯೋಗ ಪುಡಾ ವ್ಯಾಪ್ತಿಗೊಳಪಟ್ಟಂತೆ ಕಟ್ ಕನ್ವರ್ಶನ್, ಎಫ್ ಎ ಆರ್ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಕಟ್ ಕನ್ವರ್ಶನ್ ಮಾಡಿಸುವಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ಕಮಿಷನರ್ ನಝೀರ್ ಅವರ ಗಮನಕ್ಕೆ ತಂದರು. ಈ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಯಿತು. ಸಭೆಯಲ್ಲಿ ಪುತ್ತೂರು ಪುಡಾ ಕಾರ್ಯದರ್ಶಿ ಗುರುಪ್ರಸಾದ್ ಸದಸ್ಯರುಗಳಾದ ಅನ್ವರ್ ಖಾಸಿಂ,ನಿಹಾಲ್ ಪಿ ಶೆಟ್ಟಿ ಉಪಸ್ಥಿತರಿದ್ದರು.