ಗೂಗಲ್ ಮ್ಯಾಪ್ ಬಳಸಿ ಕಾರು ಚಲಾಯಿಸಿ ಯಡವಟ್ಟು: ಹಳ್ಳಕ್ಕೆ ಬಿದ್ದ ಕಾರು
ಮುಂಬಯಿ: ಗೂಗಲ್ ಮ್ಯಾಪ್‌ನ ನಿರ್ದೇಶನ ಬಳಸಿ
ಕಾರು ಚಲಾಯಿಸಿದ ಮಹಿಳೆಯೊಬ್ಬರ ಕಾರು ಹಳ್ಳವೊಂದಕ್ಕೆ ಬಿದ್ದ ಘಟನೆ ನವೀ ಮುಂಬಯಿನಲ್ಲಿ ಶುಕ್ರವಾರ ನಡೆದಿದೆ.

ಬೇಲಾಪುರ ಸೇತುವೆ ಮೇಲೆ ಇವರು ತೆರಳಬೇಕಿತ್ತು. ಆದರೆ ಗೂಗಲ್ ಮ್ಯಾಪ್ ಸೇತುವೆ ಕೆಳಗೆ ತೆರಳುವಂತೆ ಮಾರ್ಗ ತೋರಿಸಿದೆ. ಕೆಳಗಡೆ ಹಳ್ಳವಿರುವುದು ತಿಳಿಯದ ಆಕೆ ನೀರಿನೊಳಕ್ಕೆ ಕಾರಿಳಿಸಿದ್ದಾರೆ. ರಕ್ಷಣಾ ಅಧಿಕಾರಿಗಳು ಆಕೆಯನ್ನು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.