ಮಂಗಳೂರಿನಲ್ಲಿ ಸುಹಾನಾ ಟ್ರಾವೆಲ್ಸ್‌ನ ನೂತನ ಕಚೇರಿ ಶುಭಾರಂಭ
ಮಂಗಳೂರು: ಟ್ರಾವೆಲ್ಸ್ ಕ್ಷೇತ್ರದಲ್ಲಿ ಹೆಸರುವಾಸಿಯಾದ ಸುಹಾನಾ ಟ್ರಾವೆಲ್ಸ್‌ನ ನೂತನ ಕಚೇರಿ ಮಂಗಳೂರಿನ ಫಳ್ನೀರ್‌ನಲ್ಲಿರುವ ಸ್ಟರಕ್ ರಸ್ತೆಯ ಸ್ಟರಕ್ ಅವೆನ್ಯೂ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ಮಂಜೇಶ್ವರದ ಸಯ್ಯದ್ ಅಥಾವುಲ್ಲ ತಂಙಳ್ ನೂತನ ಕಚೇರಿಯನ್ನು ಉದ್ಘಾಟಿಸಿದರು. ಬಂದರ್ ಅಲ್ ಮದ್ರಸತುಲ್ ಅಝ್ಹಾರಿಯದ ಮುಅಲ್ಲಿಂ ಮಹಮ್ಮದ್ ಹನೀಫ್ ದುಅ ನೆರವೇರಿಸಿದರು. ಬಳಿಕ ಸಂಸ್ಥೆಯ ಗ್ರಾಹಕರನ್ನು ಸನ್ಮಾನಿಸಲಾಯಿತು.
ಏರ್ ಟಿಕೆಟ್, ಹಜ್ ಮತ್ತು ಉಮ್ರಾ, ಸಂಚಾರ ಮೊದಲಾದ ಸೇವೆಗಳು ಉತ್ತಮ ಗುಣಮಟ್ಟದಲ್ಲಿ, ಕಡಿಮೆ ದರದಲ್ಲಿ ದೊರೆಯಲಿದೆ ಎಂದು ಸಂಸ್ಥೆಯ ಮಾಲಕ ಸೆಯ್ಯದ್ ಅನ್ಸಾರ್ ಹೇಳಿದರು.
ಸುಹಾನ ಸಂಸ್ಥೆಯು ಕಳೆದ ಎರಡು ದಶಕಗಳಿಂದ ಉತ್ತಮ ಸೇವೆ ನೀಡುತ್ತಾ ಬಂದಿದ್ದು, ಗುಣಮಟ್ಟದಲ್ಲಿ ರಾಜಿ ಇಲ್ಲದ ಸೇವೆಯೇ ಸಂಸ್ಥೆಯನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದು ಗ್ರಾಹಕರೋರ್ವರು ಆಭಿಪ್ರಾಯಪಟ್ಟರು.
ಸಯ್ಯದ್ ಯಹ್ಯಾ, ಸಂಸ್ಥೆಯ ಸಿಬ್ಬಂದಿ ವರ್ಗ, ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದರು.