ಪುತ್ತೂರು ಸರಕಾರಿ ಆಸ್ಪತ್ರೆಯಿಂದ ವರ್ಗಾವಣೆಗೊಂಡ ವೈದ್ಯರಿಗೆ ರಕ್ಷಾ ಸಮಿತಿಯಿಂದ ಬೀಳ್ಕೋಡುಗೆ
ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ, ದಂತ ತಜ್ಞರಾದ ಡಾ. ಜಯದೀಪ್, ಅರಿವಳಿಕೆ ತಜ್ಞರಾದ ಡಾ.ಜಯಕುಮಾರಿ, ಡಾ. ಶ್ವೇತಾ ಇವರನ್ನು ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಬೀಳ್ಕೋಡುಗೆ ಸಮಾರಂಭ ವೈಧ್ಯಾಧಿಕಾರಿ ಕಛೇರಿಯಲ್ಲಿ ನಡೆಯಿತು.

ರಕ್ಷಾ ಸಮಿತಿ ಸದಸ್ಯರಾದ ಆಸ್ಕರ್ ಆನಂದ್, ಸುದೇಶ್ ಶೆಟ್ಟಿ ಶಾಂತಿನಗರ, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ , ಮುಖೇಶ್ ಕೆಮ್ಮಿಂಜೆ ಶುಭ ಹಾರೈಸಿ ಮಾತನಾಡಿದರು.
ಸದಸ್ಯರಾದ ವಿಕ್ಟರ್ ಪಾಯಿಸ್ ಹಾಗೂ ಆಸ್ಪತ್ರೆಯ ವೈದ್ಯರ ತಂಡ, ಸಿಬ್ಬಂದಿಗಳ ತಂಡದ ಸದಸ್ಯರು ಉಪಸ್ಥಿತರಿದ್ದರು.