ಪುತ್ತೂರು: ಯುವತಿಯನ್ನು ನಂಬಿಸಿ ವಂಚಿಸಿದ ಪ್ರಕರಣ: ಆರೋಪಿ ತಂದೆ ಪಿಜಿ ಜಗನ್ನಿವಾಸ್ ರಾವ್ ಪೊಲೀಸ್ ವಶಕ್ಕೆ
ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕೃಷ್ಣಾ ಜೆ. ರಾವ್ ಬಂಧನದ ಬೆನ್ನಲ್ಲೇ ಆತನಿಗೆ ಪರಾರಿಯಾಗಲು ಸಹಕರಿಸಿದ ಆರೋಪದ ಮೇಲೆ ಆತನ ತಂದೆ ಪುತ್ತೂರಿನ ಬಿಜೆಪಿ ಮುಖಂಡ ಪಿಜಿ ಜಗನ್ನಿವಾಸ್ ರಾವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಗನಿಗೆ ತಪ್ಪಿಸಿಕೊಳ್ಳಲು ನೆರವಾದ ಆರೋಪದಲ್ಲಿ ತಂದೆಯನ್ನೂ ದಸ್ತಗಿರಿ ಮಾಡಿದ್ದು ಈ ಬಗ್ಗೆ ಜಿಲ್ಲಾ ಎಸ್ ಪಿ ಡಾ. ಅರುಣ್ ಕೆ ಖಚಿತಪಡಿಸಿದ್ದಾರೆ.