ಬಂಟ್ವಾಳ: ಮುಸ್ಲಿಂ ಯುವಕರ ಮೇಲೆ ದಾಳಿ, ಓರ್ವ ಮೃತ್ಯು
ಮಂಗಳೂರು: ದುಷ್ಕರ್ಮಿಗಳ ತಂಡವೊಂದು ಇಬ್ಬರ ಮೇಲೆ ತಲವಾರು ಮಾಡಿದ ಪರಿಣಾಮ ಓರ್ವ ಮೃತಪಟ್ಟು ಇನ್ನೋರ್ವ ಗಾಯಗೊಂಡಿರುವ ಘಟನೆ ಅತ್ತೂರು ಕೊಲ್ತಮಜಲು ಎಂಬಲ್ಲಿ ಮೇ.27ರಂದು ವರದಿಯಾಗಿದೆ.

ಮೃತಪಟ್ಟವರನ್ನು ಇಮ್ಮಿಯಾಝ್ ಎಂದು ಗುರುತಿಸಲಾಗಿದೆ. ಅಬ್ದುಲ್ ರಹಿಮಾನ್ ಗಾಯಗೊಂಡ ಯುವಕ ಎಂದು ತಿಳಿದು ಬಂದಿದೆ.
ಕೊಲ್ತಮಜಲು ಎಂಬಲ್ಲಿ ಪಿಕ್ ಅಪ್ ವಾಹನದಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ತಲವಾರು ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.