ಕರಾವಳಿರಾಜ್ಯ

ಮಾಣಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275ರ ಚತುಷ್ಪಥ ಕಾಮಗಾರಿ ಸರ್ವೆ ಕಾರ್ಯ ಆರಂಭ: ಶೀಘ್ರದಲ್ಲೇ ಸರಕಾರಕ್ಕೆ ಸಮಗ್ರ ಯೋಜನಾ ವರದಿ ಸಲ್ಲಿಕೆ

ಪುತ್ತೂರು: ಬಹು ಅಪೇಕ್ಷಿತ ಮಾಣಿ- ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275ರ ಚತುಷ್ಪಥ ಕಾಮಗಾರಿಗೆ ಚಾಲನೆ ದೊರಕಿದ್ದು ಕಳೆದ ನಾಲ್ಕು ದಿನಗಳಿಂದ ಸರ್ವೆ ಕಾರ್ಯ ಪ್ರಾರಂಭವಾಗಿದೆ.

ಮಾಣಿಯಿಂದ ಸಂಪಾಜೆ ತನಕ ಸುಮಾರು 70 ಕಿ ಮೀ ಹೆದ್ದಾರಿ ಚತುಷ್ಪಥವಾಗಿ ಮೇಲ್ದರ್ಜೆಗೇರಲಿದೆ. ಈ ರಸ್ತೆಯ ಸಮಗ್ರ ಯೋಜನಾ ವರದಿ ಸಿದ್ದಪಡಿಸುವಂತೆ ಕರ್ನಾಟಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಕಳೆದ ಎರಡು ವಾರಗಳ ಹಿಂದೆ ಶಿಫಾರಸ್ಸು ಸಲ್ಲಿಸಿ ಡಿಪಿಆರ್‌ಗೆ ಅನುದಾನವನ್ನು ಬಿಡುಗಡೆ ಮಾಡಿದ್ದರು. ಪುತ್ತೂರು ಶಾಸಕರಾದ ಅಶೋಕ್ ರೈ ಮತ್ತು ಸಂಸದ ಬ್ರಿಜೇಶ್ ಚೌಟರವರು ಲೋಕೋಪಯೋಗಿ ಸಚಿವರಲ್ಲಿ ಜಂಟಿಯಾಗಿ ಮನವಿ ಸಲ್ಲಿಸಿದ್ದರು. ಕೇಂದ್ರ ಮತ್ತು ರಾಜ್ಯ ಸರಕಾರದ ಜಂಟಿ ಅನುದಾನದಲ್ಲಿ ಹೈವೇ ಕಾಮಗಾರಿ ನಡೆಯಲಿದೆ. 

ಸಾಂದರ್ಭಿಕ ಚಿತ್ರ

2600 ಕೋಟಿ ರೂ ಅನುದಾನ:
ಮಾಣಿಯಿಂದ ಸಂಪಾಜೆ ತನಕ ಸುಮಾರು 70 ಕಿ ಮೀ ಹೆದ್ದಾರಿ ಕಾಮಗಾರಿಗೆ ಸುಮಾರು 2600 ಕೋಟಿ ರೂ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಭೂ ಒತ್ತುವರಿ ಪ್ರಕ್ರಿಯೆಗೆ ಚಾಲನೆ ನೀಡುವ ಮೊದಲು ಸರ್ವೆ ಕಾರ್ಯ ಆರಂಭವಾಗಲಿದ್ದು, ಸರ್ವೆ ಕಾರ್ಯ ಪೂರ್ಣಗೊಂಡ ಬಳಿಕ ಸರಕರಕ್ಕೆ ಸಮಗ್ರ ಯೋಜನಾವರದಿಯನ್ನು ಸಲ್ಲಿಸಲಾಗುತ್ತದೆ. ಆ ಬಳಿಕ ಭೂ ಒತ್ತುವರಿ ಮತ್ತು ಪರಿಹಾರ ಹಂಚುವ ಕಾರ್ಯ ನಡೆಯಲಿದೆ, ಇದರ ಜೊತೆಗೆ ರಸ್ತೆ ಅಗಲೀಕರಣ ಕಾಮಗಾರಿಯೂ ಆರಂಭವಾಗಲಿದೆ.

Leave a Reply

Your email address will not be published. Required fields are marked *

error: Content is protected !!