SSF ತೆಕ್ಕಾರು ಯುನಿಟ್ ವತಿಯಿಂದ ಗ್ರ್ಯಾಂಡ್ ಇಫ್ತಾರ್ ಮೀಟ್

ಉಪ್ಪಿನಂಗಡಿ: ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (SSF) ತೆಕ್ಕಾರು ಯುನಿಟ್ ವತಿಯಿಂದ ಬೃಹತ್ ಗ್ರ್ಯಾಂಡ್ ಇಫ್ತಾರ್ ಮೀಟ್ ಕಾರ್ಯಕ್ರಮ ಮಾ.27ರಂದು ತೆಕ್ಕಾರು ಮಸೀದಿ ವಠಾರದಲ್ಲಿ ನಡೆಯಿತು.

SSF ಸರಳಿಕಟ್ಟೆ ಸೆಕ್ಟರ್ ಮಟ್ಟದ ಕ್ಯಾಂಪಸ್ ವಿದ್ಯಾರ್ಥಿಗಳು ಇಫ್ತಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ಯಾಂಪಸ್ ನ ಸಾಧಕ ಬಾದಕಗಳ ಬಗ್ಗೆ ಚರ್ಚಿಸಲಾಯಿತು.
ನೂರಾರು ಮುಸಲ್ಮಾನ ಭಾಂದವರು ಪವಿತ್ರ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಆಗಮಿಸಿದ ಎಲ್ಲರಿಗೂ SSF ತೆಕ್ಕಾರು ಯುನಿಟ್ ನಾಯಕರು ಅತ್ಯುತ್ತಮ ವ್ಯವಸ್ಥೆಯನ್ನು ಏರ್ಪಡಿಸಿ ಪ್ರಶಂಸಗೆ ಪಾತ್ರರಾದರು.