ಫಿಲಿಪ್ಸ್ ಹಿಡಿದ ಅದ್ಭುತ ಕ್ಯಾಚ್ ಗೆ ನಿಬ್ಬೆರಗಾದ ಕ್ರಿಕೆಟ್ ಜಗತ್ತು!

ನ್ಯೂಜಿಲೆಂಡ್ ತಂಡದ ಫೀಲ್ಡರ್ ಗ್ಲೆನ್ ಫಿಲಿಪ್ಸ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಮತ್ತೊಮ್ಮೆ ಅಚ್ಚರಿ ಮೂಡಿಸಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ನಲ್ಲಿ ಕಿವೀಸ್ ನೀಡಿದ್ದ 252 ರನ್ಗಳ ಗುರಿ ಬೆನ್ನಟ್ಟುವಾಗ ಭಾರತದ ಶುಭ್ಮನ್ ಗಿಲ್ ಅವರ ಕ್ಯಾಚನ್ನು ಹಕ್ಕಿಯಂತೆ ಎತ್ತರಕ್ಕೆ ಹಾರಿ ಅಮೋಘವಾಗಿ ಒಂದೇ ಕೈಯಲ್ಲಿ ಹಿಡಿದು ಎಲ್ಲರನ್ನೂ ದಿಗ್ಬ್ರಮೆ ಮೂಡಿಸಿದ್ದಾರೆ. ಫಿಲಿಪ್ಸ್ ಹಿಡಿದ ಆ ಕ್ಯಾಚ್ ಗೆ ಕ್ರಿಕೆಟ್ ಜಗತ್ತೇ ನಿಬ್ಬೆರಗಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಭಾರೀ ವೈರಲ್ ಆಗುತ್ತಿದೆ.