ಫುಟ್ಬಾಲ್ ಪಂದ್ಯ ಸೋತಿದ್ದಕ್ಕೆ ಅಭಿಮಾನಿಗಳ ಮಧ್ಯೆ ನಡೆದ ಕಾದಾಟದಲ್ಲಿ 127 ಮಂದಿ ಬಲಿ
ಇಂಡೋನೇಷಿಯಾ: ಫುಟ್ಬಾಲ್ ಪಂದ್ಯ ಸೋತಿದ್ದಕ್ಕೆ ಅಭಿಮಾನಿಗಳ ಮಧ್ಯೆ ನಡೆದ ಕಾದಾಟದಲ್ಲಿ 127 ಮಂದಿ ಮೃತಪಟ್ಟ ಘಟನೆ ಇಂಡೋನೇಷ್ಯಾದ ಪೂರ್ವ ಜಾವಾದ ಕಂಜುರುಹಾನ್ ಸ್ಟೇಡಿಯಂನಲ್ಲಿ ನಡೆದಿದೆ.
ಅರೆಮಾ ಎಫ್ ಸಿ ಮತ್ತು ಪರ್ಸೆಬಯಾ ಸುರಬಯಾ ನಡುವೆ ಪಂದ್ಯ ನಡೆದಿದೆ. ಇದರಲ್ಲಿ ಅರೆಮಾ ಎಫ್ಸಿ ತಂಡ ಸೋಲು ಅನುಭವಿಸಿದೆ. ಇದರಿಂದ ರೊಚ್ಚಿಗೆದ್ದ ಸಾವಿರಾರು ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಅಭಿಮಾನಿಗಳ ಮಧ್ಯೆ ನಡೆದ ಹೊಡೆದಾಟದಲ್ಲಿ ಕನಿಷ್ಠ 127 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ