ಸುಳ್ಯ: ನಿಲ್ಲಿಸಿದ್ದ ಲಾರಿಯ ಟಯರ್ ಕಳ್ಳತನ
ಸುಳ್ಯ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಯ ಟಯರ್ ಕಳ್ಳತನ ಆದ ಘಟನೆ ಸುಳ್ಯದ ಪೆರಾಜೆಯಲ್ಲಿ ಶುಕ್ರವಾರ ನಡೆದಿದೆ.
ಲಾರಿಯಲ್ಲಿ ರಬ್ಬರ್ ಮರಗಳನ್ನು ಸಾಗಾಟ ಮಾಡಲಾಗುತ್ತಿತ್ತು. ನಾಲ್ಕು ದಿನಗಳ ಹಿಂದೆ ಲಾರಿಯನ್ನು ಪೆರಾಜೆಯ ರಸ್ತೆ ಬದಿಯಲ್ಲಿ ನಿಲ್ಲಿಸಿ ಮರ ಸಾಗಾಟಗಾರರು ತಮ್ಮ ಊರಾದ ಕೇರಳಕ್ಕೆ ತೆರಳಿದ್ದರು. ಆದರೆ ಶನಿವಾರ ಬಂದು ನೋಡುವಾಗ ಲಾರಿಯ ಒಂದು ಟಯರ್ ಕಳವಾಗಿರುವುದು ಬೆಳಕಿಗೆ ಬಂದಿದೆ.