ಮುಮ್ತಾಜ್ ಅಲಿ ಅಗಲಿಕೆ ಸಮುದಾಯಕ್ಕೂ, ಸಮಾಜಕ್ಕೂ ತುಂಬಲಾರದ ನಷ್ಟ: ಹುಸೈನ್ ದಾರಿಮಿ
ಪುತ್ತೂರು: ಹೆಸರಾಂತ ಉದ್ಯಮಿ, ಸಮಾಜ ಸೇವಕ ಮುಮ್ತಾಜ್ ಅಲಿ ಅವರ ಅಗಲಿಕೆ ಸಮುದಾಯಕ್ಕೂ, ಸಮಾಜಕ್ಕೂ ತುಂಬಲಾರದ ನಷ್ಟ ಎಂದು ಧಾರ್ಮಿಕ ಮುಖಂಡ, ಆರ್.ಐ.ಸಿ ಮುಖ್ಯಸ್ಥ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ತಿಳಿಸಿದ್ದಾರೆ.
ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದ ಮುಮ್ತಾಜ್ ಅಲಿಯವರನ್ನು ವಂಚನೆಯ ಮೂಲಕ ಬಲಿಪಶು ಮಾಡಿದ ಪರಿಣಾಮ ಅವರ ಜೀವನವೇ ಅಂತ್ಯವಾಗಿದೆ, ಇದು ಸಮುದಾಯಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಮುದಾಯದಲ್ಲಿ ಒಳ್ಳೆಯವರ ಸೋಗಿನಲ್ಲಿರುವವರು ಇಂತಹ ವಂಚನಾ ಕೃತ್ಯದಲ್ಲಿ ಇದ್ದಾರೆ ಎನ್ನುವುದು ಆತಂಕಕಾರಿಯಾಗಿದ್ದು ಸಮುದಾಯ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂತಹ ಪರಿಸ್ಥಿತಿಗಳಲ್ಲಿ ಸಿಲುಕಿದವರ ಬಗ್ಗೆ ತಿಳಿದು ಬಂದರೆ ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡಬೇಕು ಎಂದ ಅವರು ಮಹಿಳೆಯರನ್ನು ಸಂಪರ್ಕಿಸಿ ವಂಚನೆ ಮೂಲಕ ಸಿಲುಕಿಸುವ ಇಂತಹ ಕೃತ್ಯಗಳು ಮುಮ್ತಾಜ್ ಅಲಿ ಅವರ ಮರಣದೊಂದಿಗೆ ಕೊನೆಗೊಳ್ಳಬೇಕು, ಇಂತಹ ದುಷ್ಟ ಕೃತ್ಯಗಳ ಬಗ್ಗೆ ಪ್ರತಿ ಜಮಾಅತ್ ಗಳು ಜಾಗೃತಗೊಳ್ಳಬೇಕು, ಮುಮ್ತಾಜ್ ಅಲಿಯವರ ಪಾರತ್ರಿಕ ಮೋಕ್ಷಕ್ಕಾಗಿ ಎಲ್ಲರೂ ಪ್ರಾರ್ಥಿಸಬೇಕೆಂದು ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ತಿಳಿಸಿದ್ದಾರೆ.