ಕುಂಬ್ರ ಮರ್ಕಝುಲ್ ಹುದಾದಲ್ಲಿ ಹುಬ್ಬನ್ನೆಬಿ ಕಾರ್ಯಕ್ರಮ: ಅಬ್ದುರ್ರಹ್ಮಾನ್ ಮಸ್ಹೂದ್ ತಂಙಳ್ ಕೂರತ್ ಭಾಗಿ
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಕ್ಯಾಂಪಸ್ ನಲ್ಲಿ ಹುಬ್ಬನ್ನೆಬಿ ಸಮಾವೇಶ ಸಯ್ಯದ್ ಅಬ್ದುರ್ರಹ್ಮಾನ್ ಮಸ್ಹೂದ್ ಅಲ್ ಬುಖಾರಿ ತಂಙಳ್ ಕೂರತ್ ರವರ ನೇತೃತ್ವದಲ್ಲಿ ಸೆ.23ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರ್ಕಝುಲ್ ಹುದಾ ಆಡಳಿತ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ ವಹಿಸಿದ್ದರು.
ಶರೀಅತ್ ಪ್ರಾಂಶುಪಾಲರಾದ ವಳವೂರು ಮುಹಮ್ಮದ್ ಸಅದಿ, ಮರ್ಕಝುಲ್ ಹುದಾ ಉಪಾಧ್ಯಕ್ಷರಾದ ಎಂಎಸ್ಎಂ ಅಬ್ದುಲ್ ರಶೀದ್ ಝೈನಿ, ಮೂಡಡ್ಕ ಮದೀನತುಲ್ ಮುನವ್ವರ ಶರೀಅತ್ ಕಾಲೇಜು ಪ್ರಾಂಶುಪಾಲರಾದ ಸಲಾಹುದ್ದೀನ್ ಸಖಾಫಿ ಮಾಡನ್ನೂರು, ಮರ್ಕಝ್ ಕುಂಬ್ರ ಶರೀಅ ಕಾಲೇಜು ಮುದರ್ರಿಸ್ ಜಲೀಲ್ ಸಖಾಫಿ ಜಾಲ್ಸೂರು, ಹನೀಫ್ ಸಖಾಫಿ ಕಡಬ, ಸಂಸ್ಥೆಯ ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ, ಪದವಿ ವಿಭಾಗದ ಶರೀಅತ್ ಮುದರ್ರಿಸ್ ಸ್ವಾಲಿಹ್ ಹನೀಫಿ, ಬರಹಗಾರ ಯೂಸುಫ್ ನಬ್ಹಾನಿ ದುಬೈ, ಪದವಿ ವಿಭಾಗದ ಪ್ರಾಂಶುಪಾಲರಾದ ಮುಹಮ್ಮದ್ ಮನ್ಸೂರ್ ಕಡಬ, ಎಂ ಎಚ್ ಕೆ ಸೌದಿ ಅರೇಬಿಯಾ ಆರ್ಗನೈಸರ್ ರಶೀದ್ ಸಖಾಫಿ ಮಿತ್ತೂರು, ಆಡಳಿತ ಸಮಿತಿಯ ಕರೀಂ ಹಾಜಿ ಕಾವೇರಿ, ಅನ್ವರ್ ಹುಸೇನ್ ಗೂಡಿನಬಳಿ, ಕೆ.ಎಂ.ಜೆ ನಾಯಕರಾದ ಹಮೀದ್ ಕನಕಮಜಲ್, ತಖಿಯ್ಯುದ್ದೀನ್ ಮದನಿ, ಮುಹಮ್ಮದ್ ಕುಂಞಿ ಶೇಖಮಲೆ ಮುಂತಾದವರು ಉಪಸ್ಥಿತರಿದ್ದರು.